ಕಾವ್ಯ ಸಂಗಾತಿ
ನಾ ನಿನಗಾಗಷ್ಟೇ ಉಳಿದೆ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಜನುಮ ಜನುಮಕ್ಕು ನಿನ್ನೊಡನೆ
ಬದುಕುವ ಕನಸು ಕಾಣಲಿಲ್ಲ,
ನಿನ್ನೊಡನೆ ಹಸೆಮಣೆ ಏರಿ
ಪಕ್ಕದಲ್ಲಿ ಕುಳಿತು ಸಂಭ್ರಮಿಸಲಿಲ್ಲ,
ನಿನ್ನ ಒರಟು ಕೈಗಳ ಹಿಡಿದು
ಸಪ್ತಪದಿ ತುಳಿಯಲಿಲ್ಲ,
ಕೆನ್ನೆಗೆ ಅರಿಶಿನ ಬಳಿದು
ಪರಿಶೀಣದಂತೆ ರಂಗೇರಲಿಲ್ಲ,
ಮೂರು ಗಂಟುಗಳ ಮಂಗಳಸೂತ್ರಕ್ಕೆ
ಕೊರಳೊಡ್ಡಲಿಲ್ಲ ,
ಆದರೆ ….
ನಿನ್ನ ಮನದಲ್ಲೊಂದಷ್ಟು ಜಾಗ
ನಿನ್ನ ಹೃದಯದ ಒಂದಷ್ಟು ಭಾಗ…
ಬೇಕೆನಿಸಿತ್ತು
ಕೊನೆಗೂ ನೀ ನನ್ನವನಾಗಲೇ ಇಲ್ಲ…
ನಾ ನಿನಗಾಗಷ್ಟೇ ಉಳಿದೆ…
ಬ್ಯೂಟಿಫುಲ್ ಸುಂದರ ಭಾವ
ಆದರೆ ಸ್ನೇಹ ಪ್ರೀತಿ ಮದುವೆ ಎನ್ನುವ ಸಂಬಂಧ ಮೀರಿದ್ದು
ಸುಂದರ ಭಾವ ಸುಂದರ ಕವನ.