ಅರ್ಚನ ಯಳಬೇರು ಕವಿತೆ-ಗಜಲ್

ಕಾವ್ಯ ಸಂಗಾತಿ

ಗಜಲ್

ಅರ್ಚನಾ ಯಳಬೇರು

ಆತ್ಮ ಜ್ಯೋತಿಯು ಜೇಷ್ಠತೆಯ ಮೆರೆಯುತಲಿ ಕಟ್ಟಿದೆ ನಗುವಿನ ತೋರಣ
ಜ್ಞಾನ ದೀವಿಗೆಯು ಮಸ್ತಕವನು ಬೆಳಗುತಲಿ ಕಟ್ಟಿದೆ ಗೆಲುವಿನ ತೋರಣ

ನವವಸಂತನ ಆಗಮನದ ಹರುಷ ತುಂಬಿರಲಿ ಸದಾ ಬಾಳ ಚಕ್ಕಡಿಯಲಿ
ಜಿನುಗುವ ಭಾವಗಳು ಭರವಸೆಯ ಬಸಿರಿನಲಿ ಕಟ್ಟಿದೆ ಒಲವಿನ ತೋರಣ

ವಸುಧೆಯ ವಯ್ಯಾರದಂತಿರಲಿ ಒಪ್ಪವಾಗಿ ಜೋಡಿಸಿಟ್ಟ ಹಸಿವಾಂಛೆಗಳು
ಚಕ್ಷುಗಳ ಛೇಡಿಸುವ ಸ್ವಪ್ನಗಳು ಸಂತೈಸುತಲಿ ಕಟ್ಟಿದೆ ಚೆಲುವಿನ ತೋರಣ

ಪ್ರೀತಿಯ ಪರಾಕಾಷ್ಠೆಯು ನೀಡುತಿರಲಿ ಅಂತರಂಗಕೆ ಸ್ವರ್ಣದ ಹೊಳಪು
ಪ್ರೇಮದ ಪ್ರಣತಿಯು ಅನುರಾಗದ ಬತ್ತಿಯಲಿ ಕಟ್ಟಿದೆ ನಲಿವಿನ ತೋರಣ

ಬಂಧ ಅನುಬಂಧ ಸಂಬಂಧದಲಿ ಮಿಂಚಿನ ಸಂಚಲನವಿರಲಿ ‘ಅರ್ಚನಾ’
ವಾತ್ಸಲ್ಯದ ಸವಿ ಜೇನಲಿ ಬಾಂಧವ್ಯದ ಗೂಡು ಕಟ್ಟಿದೆ ಮಧುವಿನ ತೋರ


One thought on “ಅರ್ಚನ ಯಳಬೇರು ಕವಿತೆ-ಗಜಲ್

Leave a Reply

Back To Top