ಕಾವ್ಯ ಸಂಗಾತಿ
ಗಜಲ್
ರಾಹುಲ ಮರಳಿ
ಆಧುನಿಕತೆಯಲಿ ಮಧ್ಯರಾತ್ರಿ ನಷೆಯಲಿ ತೂರಾಡುವುದು ಸಂತಸ
ನೈಜತೆಯಲಿ ಪ್ರೀತಿಯ ಆಲಿಂಗನ ಮಾತ್ರ ನೀಡುವುದು ಸಂತಸ.
ಗೇಣು ಬಟ್ಟೆ ತೊಟ್ಟು ಅಮಲೇರಿ ಮೈಮರೆತು ಬಿಡುವುದು ಮಂದಹಾಸ ವ್ಯಸನ
ಆಂತರಿಕ ಮನಸು ಬಿಚ್ಚಿ ಸ್ನೇಹ ಹಂಚುತ ಹರಟುವುದು ಸಂತಸ
ಮದಿರೆಯ ದಾಸರಾಗಿ ಮಾನ ಬೀದಿಗೆ ತರುವುದಾ ಆಚರಣೆಯ ರೀತಿ
ಪರಸ್ಪರ ಒಳಿತು ಮಾಡುವ ವಿಚಾರ ವಿನಿಮಯ ಮಾಡುವುದು ಸಂತಸ
ಹೆತ್ತವರ ಒಡಲಿಗೆ ಬೆಂಕಿ ಹಾಕಿ ಆಚರಿಸಿ ಪಡಬೇಕಾ ಸಂತೋಷ
ತಂದೆ ತಾಯಿಯ ಸಮ್ಮುಖದಿ ನಲಿದಾಡುವುದು ಸಂತಸ
ಜೀವಕವಿ ಬರೀ ಕ್ಯಾಲೆಂಡರ್ ಬದಲಿಸಿದರೆ ಬಂದೀತೆ ನೂತನ ವರುಷ
ಕಳೆದ ಕಹಿನೆನಪ ಮರೆತು ಸೌಹಾರ್ದತೆಯಿಂದ ಕೂಡಿಬಾಳುವುದು ಸಂತಸ