ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರ್ಷದ ವಿಶೇಷ-2023

ಬೆಳಕಿನ ಪ್ರಕಾಶವಾಗಿ ಬಾ

ಡಾ.ಪುಷ್ಪಾವತಿ ಶಲವಡಿಮಠ

n

ಎನ್ನೆದೆಯಂಗಳಕೆ ನೀ
ತಾಯಿ ಹೃದಯದ ಸ್ನೇಹಿತನಾಗಿ ಬಾ

ನೊಂದಾಗ ಕಣ್ಣ ನೀರ ಒರೆಸುವ
ಸಂತೈಸುವ ಸಂತನಾಗಿ ಬಾ

ಜಗದ ಗೊಂದಲಗಳಲಿ ನಾ ಸಿಲುಕಿ
ದಿಕ್ಕು ಕಾಣದೇ ನಿಂತಿರುವಾಗ
ಅನುಭವಸ್ಥ ಮಾರ್ಗದರ್ಶಕನಾಗಿ ಬಾ

ಗುರುವಾಗಿ ಅಜ್ಞಾನದ ತಿಮಿರ ಕಳೆದು
ಕೈ ಹಿಡಿದು ನಡೆಸಲು ಬಾ

ಮೋಸ ವಂಚನೆಯ ಬಲೆಯಲಿ
ಬಂಧಿಯಾಗಿ ನರಳುತಿರುವಾಗ
ಆತ್ಮಸ್ಥೈರ್ಯದ ಆಶಾ ಕಿರಣವಾಗಿ ಬಾ

ತಂತ್ರ ಕುತಂತ್ರಗಳ ಕೂಪದಲಿ
ಹೂತು ಹೋಗುತಿರುವಾಗ
ಬುದ್ಧನಾಗಿ-ಸಂಬುದ್ಧನಾಗಿ
ಪ್ರೀತಿ ಮಮತೆಯ ದಾರಿ ತೋರಲು ಬಾ

ಹತಾಶೆ ನಿರಾಶೆಗಳ ಜಂಜಾಟದಲಿ
ತೊಳಲುತಿರುವಾಗ ಭವದ ಕತ್ತಲೆ ಕಳೆದು
ಸತ್ಯ ಮಾರ್ಗ ತೋರಲು ಬಸವನಾಗಿ ಬಾ

ಅನ್ಯಾಯದ ಸಂತೆಯಲಿ ಸಮತೆಗಾಗಿ
ಹುಡುಕುತಿರುವಾಗ ಬಾಬಾ ಸಾಹೇಬನಾಗಿ ಬಾ

ಎಂತಹ ಪರಿಸ್ಥಿತಿಯಲ್ಲೇ ನಾನಿದ್ದರೂ
ಆತ್ಮ ರಕ್ಷಣೆಯ ಗೋಡೆ ಕಟ್ಟಿ
ಮಾನಾಭಿಮಾನ ರಕ್ಷಿಸುವ ರಕ್ಷಕನಾಗಿ ಬಾ

ನೀ ಎನ್ನ ಹೃದಯಕೆ
ಬೆಳಕಿನ ಪ್ರಕಾಶವಾಗಿ ಬಾ

ಬಿಡದೇ ನೀ ಎನ್ನೆದೆಯಲಿ
ಸದಾ ನೆಲೆಸಲು
ಕರುಣಾಳು ಬೆಳಕಾಗಿ ಬಾ
ಬೆಳಕಿನ ಕಿರಣವಾಗಿ ಬಾ


About The Author

Leave a Reply

You cannot copy content of this page

Scroll to Top