ಪುಟ್ಟರ ಪುಟ್ಟ-ಮಕ್ಕಳ ಕವಿತೆ

ಕಾವ್ಯ ಸಂಗಾತಿ

ಪುಟ್ಟರ ಪುಟ್ಟ-ಮಕ್ಕಳ ಕವಿತೆ

ಡಾ. ತಯಬಅಲಿ.ಅ. ಹೊಂಬಳ

ಕುವೆಂಪು ಒಂದು ವಿಶ್ವ
ಅಕ್ಷರಗಳ ಕೋಶ
ಈ ನೆಲದ ಭಾಷೆ
ನಡೆ ನುಡಿಯ ದಿಶ

ಅಕ್ಷರಗಳ ದಾಸ
ಕೋಶಗಳ ಭೀಷ್ಮ
ಸರಳತೆಯ ತಂದೆ
ಗುಣದಲ್ಲಿ ಪರಮಾನ್ನ

ನಮ್ಮ ಕನ್ನಡದ ರೋಜ
ಅಕ್ಷರಗಳ ಬಿಜ
ಸೂರ್ಯನಂತೆ ತೇಜ್
ಕುಪ್ಪಳ್ಳಿಯ ರಾಜ

ಕುಲಗೌರವ ನಾಡಿಗೆ
ವೆಂಕಟಪ್ಪರ ವಂಶಕೆ
ಪುಟ್ಟರ ಪುಟ್ಟ
ಕನ್ನಡದ ಕಂದ.


Leave a Reply

Back To Top