ಮ.ಮೋ. ರಾವ್ ಕವಿತೆ-ಚಿಂತಿಸುತ್ತೇವೆ

ಕಾವ್ಯ ಸಂಗಾತಿ

ಚಿಂತಿಸುತ್ತೇವೆ

ಮ.ಮೋ. ರಾವ್

ಜೀವನದಲ್ಲಿ ಪ್ರೀತಿ ಸ್ನೇಹ ದ್ವೇಷ ಅಸೂಯೆ

ನಿಷ್ಕಾಳಜಿ ನಿರ್ಲಿಪ್ತತೆ ಆಸೆಲಾಲಸೆಗಳ

ಹೊರತು ಬಹುಶಃ ಏನೂ ಗಳಿಸಿಲ್ಲ

ಆದರೂ

ಉಂಬಳಿ ಕೊಟ್ಟುಹೋಗುವುದರ ಬಗ್ಗೆ

ಚಿಂತಿಸುತ್ತೇವೆ.

ಇರುವಾಗ ಬೇಕೆಂದು ಆಸ್ತಿಪಾಸ್ತಿ

ಎಂದು ಏನೆಲ್ಲ ಅರ್ಥೈಸುತ್ತೇವೆ

ಹೋಗುವಾಗ ಏನನ್ನೂ

ಖಾಲಿಮಾಡಿ ಹೋಗಲಾರೆವು

ಆದರೂ

ಅವು ಹಾಗೇ ಉಳಿಯಲಾರವು.

ಮಕ್ಕಳೇ ನಮಗಿಂತ ಬೇರೆಯಾಗಿದ್ದಾರೆ

ಆದರೂ

ವಂಶಾವಳಿ ವಾರಸುದಾರರ ಬಗ್ಗೆ

ಚಿಂತಿಸುತ್ತೇವೆ.

ಸಂಸ್ಕಾರ ಸಂಸ್ಕೃತಿಗಳೂ ಬದಲಾಗುತ್ತಿವೆ

ಭಾವನೆ ಅರ್ಥಗಳೂ ಕೂಡ

ಆದರೂ

ಬಳುವಳಿ ಬಿಟ್ಟುಹೋಗುವುದರ ಬಗ್ಗೆ

ಚಿಂತಿಸುತ್ತೇವೆ.

(ಖಲೀಲ್ ಗಿಬ್ರಾನ್ ಸಾಹಿತ್ಯದಿಂದ ಪ್ರೇರಿತ)

ಮ.ಮೋ. ರಾವ್ ರಾಯಚೂರು.

Leave a Reply

Back To Top