ತಲೆ-ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ

ತಲೆ

ಡೋ ನಾ ವೆಂಕಟೇಶ

ಕುವೆಂಪು
ಬಂದಾಗಲೆಲ್ಲ ನಿಮ್ಮ ನೆನಪು
ಪುಟಿದೇಳುವ ಪ್ರಶ್ನೆಗಳೆಷ್ಟು
ಎಷ್ಟು
ಹಲವು ಬಾರಿ ಯೋಚಿಸಿ
ಹಣ್ಣಾಗಿದ್ದೇನೆ

ನೆಟ್ಟ ಬೈತಲೆಯ ಇಕ್ಕೆಲಗಳಲ್ಲೂ
ಹಾಸಿರುವ ಬೆಳ್ಳಿ ಕೂದಲ ಕಂಡು ಅದಕ್ಕವಚಿದ ತಲೆಚಪ್ಪಡಿಯ ಕೆಳಗಣ ಬುದ್ಧಿ
ಎಂಥದ್ದಿರಬಹುದು ಇರಬಹುದು ಯೋಚಿಸಿ
ಸೋತು ಹೋಗಿದ್ದೇನೆ

ಆದರೂ ಅವರಿವರು ಹೇಳಿದ
ಹದಿನಂಟು ಮಾತು ಕೇಳಿ
ನಿಮಗೂ ಕನ್ನಡಕ್ಕೂ ನಂಟು
ಹಾಕಿ ಅಷ್ಟಕ್ಕೇ ಸುಮ್ಮಗೇ
ಕುಳಿತು ಬಿಟ್ಟರೆ ನನ್ನ ಪರಿಸ್ಥಿತಿ ಮಲೆನಾಡಿನ ಕಾಡಲ್ಲಿ ಕಳೆವ
ಒಬ್ಬಂಟಿಗನ ಸ್ಥಿತಿ

ಆಂ–
ಇಲ್ಲಿ ನೋಡಿ ಸ್ವಾಮಿ ಕೊಂಚ ಕೇಳಿ.
ಮಲೆನಾಡಿಗೂ ಮೈಸೂರಿಗೂ
ಇರುವ ದೂರ?
ಮೈಲಿ ಫರ್ಲಾಂಗು ಅಡಿ
ಅಥವಾ ಇವೆರಡೂ ಒಂದೆ ಊರ!
(ನಿಮಗೇನು ಬಿಡಿ ಸ್ವಾಮಿ ಎಷ್ಟಿದ್ದರೂ ಸರಿ,ರಾಮಾಯಣವನ್ನೇ
ಪುನರಾಯಣ ಮಾಡಿ
ಬಿಡುತ್ತೀರಿ. ಕುಪ್ಪಳ್ಳಿಯನ್ನೇ
ಜೊತೆಯಲ್ಲಿ ಕೊಂಡೊಯ್ಯುತ್ತೀರಿ)

ಬಿಡಿ ಸಾರ್ ಈಗ ಇವೆಲ್ಲಾ,
ಇಲ್ಲೊಂದು ಪ್ರಶ್ನೆ.
ನೀವಾರು ಎಂಬುದೇ ನನ್ನ
ಸದ್ಯದ ಸಮಸ್ಯೆ:
ಕವಿ ಕನ್ನಡ ಕುಲಪತಿ ಅಥವ
ಕುವೆಂಪು!!

ಹಲವು ಬಾರಿ ಯೋಚಿಸಿ
ಹಣ್ಣಾಗಿದ್ದೇನೆ .
ನಿಮ್ಮ ಬೆಳ್ಳಿ ಕೂದಲ ಕೆಳಗಣ
ತಲೆಚಪ್ಪಡಿಯ ಒಳಗಣ
ಬುಧ್ಧಿ
ಎಂಥದ್ದಿರಬಹುದು ಇರಬಹುದು ಯೋಚಿಸಿ
ನನ್ನ ತಲೆ
ಕಳೆದು ಕೊಂಡಿದ್ದೇನೆ


2 thoughts on “ತಲೆ-ಡೋ ನಾ ವೆಂಕಟೇಶ

  1. I am really impressed with your Humbleness and Humility. Inspite being a very good Kannada Poet yourself, you have shown great respect to ರಾಷ್ಟ್ರಕವಿ
    ಕುವೆಂಪು.

  2. Thank you very much Manjanna!
    You have always spoken kind and encouraging words to me
    ಎಲ್ಲೆಂದೆಲ್ಲಿಯ ಹೋಲಿಕೆ
    We are miniscules!!

Leave a Reply

Back To Top