ಕಾವ್ಯ ಸಂಗಾತಿ
ಕೆ.ಶಶಿಕಾಂತ
ಪುಟ್ಟಪ್ಪ–
ಇಟ್ಟರು ಹೆಸರು ಪುಟ್ಟಪ್ಪರೆಂದು
ಜಗಕೆ ತೋರಲು ಬೆಟ್ಟಪ್ಪರೆಂದು
ಎಳವೆಯೊಳೆ ಒರೆದ ನುಡಿಯು
ಕಲ್ಲಿನೊಳು ಕೆತ್ತಿದ ಪರಿಯು
ಗುರುವಿನಾಣತಿಯಂತೆ ನಡೆದು
ಬಿಡದೆ ಕನ್ನಡದಿ ಬರೆದು ಬರೆದು
ಅಕ್ಕರದಿ ತುಂಬಿತು ಮಲೆನಾಡ ಹಸಿರು
ಸಹ್ಯಾದ್ರಿಗೂ ಅದು ಮಿಗಿಲು ಮುಗಿಲು
ಕಾನೂರು ರಾಣಿ,ಮದುಮಗಳ ವಾಣಿ
ಅನುರಣಿಸಿತು ಮಲೆಮಲೆಯ ಮೀರಿ
ಆರಿಗೂ ಸಿಗದು ಆಳ ಎತ್ತರ
ಅಗಮ್ಯವಿಹುದಿಲ್ಲಿ ಅನುಭವದ ಬಿತ್ತರ
ತಲೆಯೆತ್ತಲು ಬಾಳು ಸಲ್ಲದಿಲ್ಲಿ
ಕೈಮುಗಿದು ಬಾಗುವುದೀ ಗುಡಿಯಲ್ಲಿ
ಸಿಡಿಲಾದರೇನು ಶಾಸ್ತ್ರದ ದನಿಯು
ಎದೆಯ ದನಿಯು ಅದಕೂ ಮಿಗಿಲು
ಸುರಿಯಿತಿಲ್ಲಿ ರಾಮಾಯಣದ ಸುಧೆಯು
ಸವಿದು ಕುಣಿದ ವಾಲ್ಮೀಕಿ ಋಷಿಯು
ಕನ್ನಡಿಯೊಳು ಕಂಡಂತೆ ಕರಿಯು
ಕವಿಶೈಲದೊಳಿರ್ಪನೀ ಕವಿಯು
ಎಂಥ ಪೆಂಪು ಎಂಥ ಕಂಪು
ನಾಡಗುಡಿಯ ಸಿರಿಯ ಸೊಂಪು
ಹಾ ಕುವೆಂಪು ಹಾ ಕುವೆಂಪು
ತಾಯಿ ದೇವಿಯ ಸಿರಿಗಂಪು
ನಮ್ಮೆಲ್ಲರೊಳು ಹರಿದು ಬಂತು
ಕುಣಿಸುತಿದೆ ಚೇತನವಾಗಿ ನಿಂತು
ಇಟ್ಟರು ಹೆಸರು ಪುಟ್ಟಪ್ಪರೆಂದು
ಜಗಕೆ ತೋರಲು ಬೆಟ್ಟಪ್ಪರೆಂದು
ಎಳವೆಯೊಳೆ ಒರೆದ ನುಡಿಯು
ಕಲ್ಲಿನೊಳು ಕೆತ್ತಿದ ಪರಿಯು
ಗುರುವಿನಾಣತಿಯಂತೆ ನಡೆದು
ಬಿಡದೆ ಕನ್ನಡದಿ ಬರೆದು ಬರೆದು
ಅಕ್ಕರದಿ ತುಂಬಿತು ಮಲೆನಾಡ ಹಸಿರು
ಸಹ್ಯಾದ್ರಿಗೂ ಅದು ಮಿಗಿಲು ಮುಗಿಲು
ಕಾನೂರು ರಾಣಿ,ಮದುಮಗಳ ವಾಣಿ
ಅನುರಣಿಸಿತು ಮಲೆಮಲೆಯ ಮೀರಿ
ಆರಿಗೂ ಸಿಗದು ಆಳ ಎತ್ತರ
ಅಗಮ್ಯವಿಹುದಿಲ್ಲಿ ಅನುಭವದ ಬಿತ್ತರ
ತಲೆಯೆತ್ತಲು ಬಾಳು ಸಲ್ಲದಿಲ್ಲಿ
ಕೈಮುಗಿದು ಬಾಗುವುದೀ ಗುಡಿಯಲ್ಲಿ
ಸಿಡಿಲಾದರೇನು ಶಾಸ್ತ್ರದ ದನಿಯು
ಎದೆಯ ದನಿಯು ಅದಕೂ ಮಿಗಿಲು
ಸುರಿಯಿತಿಲ್ಲಿ ರಾಮಾಯಣದ ಸುಧೆಯು
ಸವಿದು ಕುಣಿದ ವಾಲ್ಮೀಕಿ ಋಷಿಯು
ಕನ್ನಡಿಯೊಳು ಕಂಡಂತೆ ಕರಿಯು
ಕವಿಶೈಲದೊಳಿರ್ಪನೀ ಕವಿಯು
ಎಂಥ ಪೆಂಪು ಎಂಥ ಕಂಪು
ನಾಡಗುಡಿಯ ಸಿರಿಯ ಸೊಂಪು
ಹಾ ಕುವೆಂಪು ಹಾ ಕುವೆಂಪು
ತಾಯಿ ದೇವಿಯ ಸಿರಿಗಂಪು
ನಮ್ಮೆಲ್ಲರೊಳು ಹರಿದು ಬಂತು
ಕುಣಿಸುತಿದೆ ಚೇತನವಾಗಿ ನಿಂತು