ಇಮಾಮಹುಸೇನ ಮದ್ಗಾರಕವಿತೆ-ಬಡವಿನಾನು

ಕಾವ್ಯ ಸಂಗಾತಿ

ಬಡವಿನಾನು

ಇಮಾಮಹುಸೇನ ಮದ್ಗಾರ

ಅಟ್ಟಹಾಸದಿನಗುವ ದುಖಃಮರೆಸುವ ಗುಟ್ಟು ಕಲಿಸಿಕೊಡು ನಂಗೂ
ಕತ್ತಲೆಯ ಕತ್ತರಿಸುವೆ
ನಾನೂಪ್ರೀತಿಯ ಹಣತೆಹಚ್ಚಿ

ಹುಣ್ಣಿಮೆಯ ಚಂದಿರಗಂದು ನಕ್ಷತ್ರಗಳ ಕಾವಲಿತ್ತು ನನ್ನೆದೆಯಹುಣ್ಣಿಮೆಗೆ
ನಿನ್ನ ರಕ್ಷಣೆಯಿತ್ತು
ಕಮ್ಮನೆತೋಟದ ತಂಪಿನೆದೆಯಲಿ ನಿನ್ನಪ್ಪುಗೆಯ ಬಿಸಿಯುಸಿರಿತ್ತು

ಆ ದುಗ್ಧರಾತ್ರಿಯ ನೆನಪಿನ್ನೂ ಮರೆಯಾಗಿಲ್ಲ ಇನಿಯ ಹೂತಿಟ್ಟ ಕನಸುಗಳಿಗೆ ಸಾವಿದೇಯಾ ಗೆಳೆಯಾ ?
ಆ.‌ರಾತ್ರಿಬೆಳದಿಂಗಳ ನಗೆಯಿನ್ನೂ ಮಾಸಿಲ್ಲ ಒಡೆಯಾ

ಬಿಳಿಯ ಬಟ್ಟೆಯಿಂದ ಇದ್ದಿಲೊರಿಸಿದಂತೆ
ಮತ್ತೆ ನೆನಪಾಗುತಿವೆ ನೆನಪುಗಳು ಬಲಗೈಹೆಬ್ಬೆರಳಿನ ನೋವಿನಂತೆ ತುಟಿಯಹಿಂದಿನ ಗಾಯದಂತೆ
ಮೈಮೇಲೆಳುವ ಐತಿಗೆಯ ತುರಿಕೆಯಂತೆ

ಜೇನಿನರಾಣಿ ಸೂರ್ಯನ ಬೆಳಕಿನಸವಿ ಸವಿಯಬಹುದೇ ?
ಕಾಲಜೇಡನ ಬಲೆಗೆ ಸಿಕ್ಕಜೀವಿ ಹೊಂಗನಸ ಕಾಣಬಹುದೇ ?
ಅಟ್ಟಹಾಸದಿ ನಗುವದುಃಖ ಮರೆಯುವ ಗುಟ್ಟುಪ್ರೀತಿಗೂ ಗೊತ್ತಿರಬಹುದೇ ?

ಸುಳಿಗಾಳಿ ಸುಳಿಗೆಸಿಲುಕಿದೆ ನನ್ನೊಲವ ವನದ ಹೂವು
ಹಳೆಯ ಪಳಕೆಗೆ ಬರಸಿಡಿಲಿನಂತೆ ಬಂದೆರಗಲಿಸಾವು
ಆಗಲಾದರೂ ಮರೆಯಾಗಬಹುದು ನೋವು.

ನನ್ನೊಲವಿನಲಿ ನಿನ್ನ ಗೆಲುವಿರಲಿಗೆಳೆಯಾ…
ಬಡವಿನಾನು ಬೆಲ್ಲತರಬಲ್ಲೆ ಬಾಯಿ ಸಿಹಿಮಾಡಲು


ಇಮಾಮಹುಸೇನ ಮದ್ಗಾರ

Leave a Reply

Back To Top