ಕಾವ್ಯ ಸಂಗಾತಿ
ತುಂಬಿದ ತೋಟ
ಸುಲಭಾ ಜೋಶಿ ಹಾವನೂರ
ಭ್ರಮನಿರಸನಗೂಂಡ ಭ್ರಮರ.
ಕ್ರತ್ರಿಮವಲ್ಲದ ಸಹಜ ಸುಂದರ
ಹೂವನ್ನು ಹುಡುಕುತ್ತಲ್ಲಿತ್ತು.
ಬಸವಳಿದ ಭಾವಕ್ಕೆ ಕ್ರತ್ರಿಮ ನಗೆಯನ್ನು ಸೂಸುತ್ತ
.ಸೂಗಸಾಗಿ ಹಾರುತ್ತಲಿತ್ತು.
ಸುತ್ತಲೂ ಒಣಗಿದೆಲೆಗಳ ಹಾಸುಹಾಸಿತ್ತು.
ಫರ ಫರ ಘರ ಘರೆಂದ
ಒಣಗಿದೆಲೆಗಳ ಶಬ್ದ ತನ್ನ ಕಿವಿಗೆ ಬೀಳದಂತೆ
ಹಗುರಾಗಿ ಹೆಜ್ಜೆಗಳನ್ನಿಡುತ್ತಲ್ಲಿತ್ತು.
ಸುತ್ತಲು ನೋಡಿದರೂ ಅತ್ತು ಬಿಡುವಷ್ಟು
ವ್ಯಥಾವಸ್ತುವಿತ್ತು
ಆದರೂ ಆ ಕಥಾವಸ್ತುವಿನ ನಾಯಕನಾಗದಂತೆ
ಜಪ್ಪಿಸಿತ್ತು ತನ್ನನ್ನು.
ಸದಾ ಸುಂದರವಾದುದನ್ನೇ ಜಪಿಸುತ್ತಿತ್ತು.
ಹೂರಗೆ ಅಪರಿಹಾರ್ಯ ಸ್ವೀಕಾರದ ಆಕಾರ.
ಒಳಗೆ ಓಂಕಾರದ ಪ್ರಾಕಾರ.
ತನ್ನೂಳಗೆ ತಾನೂಂದು ತುಂಬಿದ
ತೋಟ ಬೆಳೆಸುತ್ತಲ್ಲಿತ್ತು.
ಅರಳುವಿಕೆಗೆ ಅಳಕು ನಿರ್ಮಿಸಿ
ಹುರುಳಿಲ್ಲದ್ದು ಪರಿಮಳ ಹೇಗಾದೀತು.
ಮಗುವಿನ ಮುಗ್ಧ ಹಾಲಿನಂಥ ನಗೆ ಒಂದೇ ಒಂದು.
ಅಟ್ಟಹಾಸದ ದಗ್ಧ ನಗೆಯ ಹೂಗೆ ಬಗೆ ಬಗೆಯವು.
ಅದಕ್ಕೆ
ಇದೂಂದು ಚಕ್ರವ್ಯೂಹ. ಅಕ್ಕರ್ಸ್ಥಳದಲ್ಲಿ ನಂದನವನ ಹೇಗಾದೀತು.
ಅಂತರಂಗದ ಬಾಂಧವ್ಯದ ತೋಟಪಟ್ಟಿಯಲ್ಲಿ ಮಾತ್ರ
ನಿಭಾಯಿಸುವ ನಿರ್ಭಯದ ನಿರೂಪಣೆ ಅರಳುವವು.
ತನ್ನೂಳಗೆ ತಾನಾಗಿಯೇ ತುಂಬಿದ
ತೋಟ ಬೆಳೆಯುವುದು..