ಕಾವ್ಯ ಸಂಗಾತಿ
ಪ್ರೇಮದೊಡೆಯ
ಡಾ. ತಯಬಅಲಿ. ಅ. ಹೊಂಬಳ
ಗಾಲಿಬ್ ಗಂದ ಗಂದಮೆ
ಸುಗಂಧ ತುಮಿತೊ ಹೋ
ಪ್ರೇಮರತನಕೆ ದಿಲ್ ಮೆ
ಗಾಲಿಬ್ ಪ್ರೇಮದ
ಗಾಳಿಗೆ ತಂಗಾಳಿಯು
ನಾಚಿ ನೀರಾಗಿದ್ದಳೆ..
ಪ್ರೇಮ ನೀವೆದನೆಗೆ
ನಿರ್ಮಲ ಹೃದಯದ
ಮಿಲನಕೆ ಗಾಲಿಬ್ ಕಾರಣನೆ..
ಹೃದಯ ಹೃದಯಗಳ
ಭಾಷೆ ನುಡಿಯಾಗಿ ರಚಿಸಿ
ನಿರ್ಮಲ ಪ್ರೇಮಗೋಷ್ಠಿಗೆ
ಕಾರಣೀಕ ಗಾಲಿಬ್..
ಪ್ರೇಮ ರೋಗವು ಅಂಟಿಸಿ
ನಿದ್ದೆ ಹತ್ತಿರ ಸುಳಿಯದ
ಹೃದಯಗಳಿಗೆ
ಚಾಮರ ಬೀಸಿದ ಗಾಲಿಬ್..
ಕಣ್ಣೋಟದ ನೆಲದಲ್ಲಿ
ಚಿತ್ತಾರದ ರಂಗೋಲಿಯ
ಭಾಷೆ ಕಲಿಸಿದ ಗಾಲಿಬ್..
ಕಂಪಿಸಿದ ಮನಗಳಿಗೆ
ಇಬ್ಬನ್ನಿಯ ತೆಂಪರಿಸಿ
ಮಧುರ ಗಾಳಿ ಸೋಸಿದ ಗಾಲಿಬ್..
ಮೊದಲ ಹೃದಯಗಳ
ಮೊದಲ ಮಾತು
ಪವಿತ್ರ ನಿರ್ಮಲ ನೆನಪಾದನು ಗಾಲಿಬ್
ಅಣು ಅಣುವಿನಲ್ಲಿ ಹೃದಯ ಭಾಷೆ ಅರಿತು ಗಾಲಿಬ್ ..
ನೀ ನೆಲೆಸಿದ ಲೋಕದಲ್ಲಿ
ಪ್ರೇಮಿಗಳಿರುವರೆ ಗಾಲಿಬ್
ಇರದೆ ಹೋದರೆ ಬರುವೆಯಾ
ಮತ್ತೊಂದು ಇತಿಹಾಸ
ಬರೆಯಲು ಗಾಲಿಬ್.
—————————-
ಡಾ. ತಯಬಅಲಿ. ಅ. ಹೊಂಬಳ, ಗದಗ