ಧನಪಾಲ‌ ನಾಗರಾಜಪ್ಪ-ಅಬಾಬಿಗಳು

ಕಾವ್ಯ ಸಂಗಾತಿ

ಕಾವ್ಯ ಸಂಗಾತಿ

ಅಬಾಬಿಗಳು

ಧನಪಾಲ‌ ನಾಗರಾಜಪ್ಪ


ಪ್ರೀತಿ…
ಅರ್ಥವೇ ಆಗದ ದೊಡ್ಡ ಪುಸ್ತಕ
ಅರ್ಥವಾದರೆ ಬದುಕು ಸಾರ್ಥಕ
ಧನು…
ಪ್ರೇಮಾಯಾ ತಸ್ಮೈ ನಮಃ!


ಬಡವನೋ ಬಲ್ಲಿದನೋ
ಅಜ್ಞಾನಿಯೋ ವಿಜ್ಞಾನಿಯೋ
ಅಧಮನೋ ಉತ್ತಮನೋ
ಧನು…
ಕಾಲ ಯಾರನ್ನೂ ಬಿಡುವುದಿಲ್ಲ.


ಮುಕ್ತವಾಗಿ ಮಾತನಾಡು
ಎಲ್ಲರ ಕಷ್ಟಗಳನ್ನು ತೀರಿಸಲಾಗದು
ಕೊಂಚವಾದರೂ ಸ್ಪಂದಿಸುವುದು ಕಲಿ
ಧನು…
ಸ್ನೇಹ-ಪ್ರೀತಿಗಳಲ್ಲೇ ದೈವವು ನೆಲೆಸಿದೆ.


ಸಂಘಕ್ಕೆ ಶರಣಾಗು
ಧರ್ಮಕ್ಕೆ ದೀಪವಾಗು
ಬುದ್ಧತ್ವಕ್ಕೆ ಬದ್ಧನಾಗು
ಧನು…
ಜ್ಞಾನವೇ ದಿಟವಾದ ದೈವ.


ಭೂತಕಾಲದ ಬಗ್ಗೆ ಅಳಬೇಡ
ಭವಿಷ್ಯದ ಬಗ್ಗೆ ಚಿಂತಿಸಬೇಡ
ವರ್ತಮಾನದಲ್ಲಿ ಜೀವಿಸು
ಧನು…
ಬುದ್ಧಂ ಶರಣಂ ಗಚ್ಚಾಮಿ.


One thought on “ಧನಪಾಲ‌ ನಾಗರಾಜಪ್ಪ-ಅಬಾಬಿಗಳು

Leave a Reply

Back To Top