ಕಾವ್ಯ ಸಂಗಾತಿ
ಆಶ್ಚರ್ಯವೆಂದರೇ
ಮಮತ (ಕಾವ್ಯ ಬುದ್ಧ)

ಆಶ್ಚರ್ಯವೆಂದರೆ
ನಾವು ನೀವು ಜನಸಾಮಾನ್ಯರು
ಸಾಯುವ ಹಾಗೆ
ಜಗದ್ಗುರುಗಳು ಸಾಯುವುದಿಲ್ಲ
ನೋಡಿ
ಅವರಿಗೆಲ್ಲಾ ಸ್ವರ್ಗಸ್ಥರಾಗಿಯೇ
ರೂಢಿ..
ಆಶ್ಚರ್ಯವೆಂದರೆ
ಹಾಲಿ ಮಂತ್ರಿಗಳ
ಬಾಡಿ ಗಾರ್ಡುಗಳು
ಸರ್ಕಾರಿ ದರ್ಬಾರಿನಲ್ಲಿ
ಮಾಜಿಗಳಿಗಾದರೋ
ಬಾಡಿಗೆ ಗಾರ್ಡುಗಳು
ಅವರವರ ಖರ್ಚಿನಲ್ಲಿ
ಇಲ್ಲಿ ರಲ್ಲರೂ ಸಮಾನರು
ಅಧಿಕಾರದಲ್ಲಿದ್ದರೆ ಹೆಚ್ಚು
ಸನ್ಮಾನ್ಯರು….
ಆಶ್ಚರ್ಯವೆಂದರೆ
ಸ್ಥಬ್ದಗೊಂಡರೆ ಮಿದುಳು
ಸತ್ತ ಹಾಗೆ ಮನುಜ
ಮತ್ತೆ ರಾಜಕಾರಣದಲ್ಲಿ
ಹ್ಯಾಗೆ ಎಂಬ ಪ್ರಶ್ನೆ
ಸಹಜ