ಮಕ್ಕಳ ಕವಿತೆ
ಎಲ್ಲಾ ಹೊತ್ತು ಗಣಿತ ಗಮ್ಮತ್ತು
ಲಕ್ಷ್ಮೀದೇವಿ ಕಮ್ಮಾರ
ಗಣಿತ ಬಲು ಸುಲಭ
ಸುಲಿದ ಬಾಳೆಹಣ್ಣು
ಲಕ್ಷ್ಯ ಕೊಟ್ಟು ಕಲೆತರೆ
ಬಲು ಖುಷಿ ಕೊಡುವ ಹೊನ್ನು
ಗರಗರ ತಿರುಗಿ ಗೆರೆ ಎಳೆದರೆ ವೃತ್ತ
ಮನೆ ಸುತ್ತ ಒಂದು ಸುತ್ತು ತಿರುಗಿದರೆ ಆಯ್ತು ಆಯತ
ದಿನ ದಿನ ಕುಡಿಕೆಯಲ್ಲಿ ಕೂಡಿಟ್ಟರೆ ರೊಕ್ಕ ಅದೇ ಕೂಡಿಸುವ ಲೆಕ್ಕ
ಮೊತ್ತದಲ್ಲಿ ಒಂದಿಷ್ಟು ತೆಗೆದರೆ
ಮಿಕ್ಕಿದ್ದೆ ಕಳೆ ಲೆಕ್ಕ
ಸಮನಾಗಿ ಹಂಚಿ ತಿನ್ನುವುದು ಭಾಗಾಕಾರ ಎಲ್ಲರೂ ಕೂಡಿ ದುಡಿದು ಸಂಗ್ರಹಿಸಿದರೆ ಅದೇ ಗುಣಾಕಾರ
ಎರಡೆರಡು ರೂಪಾಯಿ ಹಾಕುತ್ತಾ ಹೋದರೆ ಅದೇ ಎರಡರ ಮಗ್ಗಿ
ಹೀಗೆ ಮಾಡಿದರೆ ಉಳಿದೆಲ್ಲ ಮಗ್ಗಿ
ಮನೆ ಒಳಗೂ ಹೊರಗೂ ಗಣಿತಾಕೃತಿಗಳದೇ ಸುಗ್ಗಿ
ಎಲ್ಲಾ ಕಡೆನೂ ಬೇಕು ಗಣಿತದ ಲೆಕ್ಕಾಚಾರ ಅಂಕಿ ಸಂಖ್ಯೆ ಜ್ಞಾನವಿಲ್ಲದಿರೆ ನಡೆಯದು ವ್ಯವಹಾರ
ಪ್ರತಿನಿತ್ಯ ಮಾಡೋ ಲೆಕ್ಕ
ಪರೀಕ್ಷೆಯಲ್ಲಿ ಪಾಸ್ ಆಗೋದು ಪಕ್ಕಾ
ಎಲ್ಲಾ ವಿಷಯ ರಾಜ ಗಣಿತ
ಸಂಖ್ಯಾಜ್ಞಾನವುಳ್ಳವನ ಬದುಕು ಸುಲಲಿತ
ಕಬ್ಬಿಣ ಕದಲೆಯಂತಹ ಗಣಿತವನ್ನು ಬಹಳ ಸುಲಭವಾಗಿ ಬಿಡಿಸಿ ಹೇಳಿರುವಿರಿ…ಚೆನ್ನಾಗಿದೆ ಗಣಿತದ ಕವಿತೆ. ಅಭಿನಂದನೆಗಳು ಮೇಡಂ