ಕಾವ್ಯ ಸಂಗಾತಿ
ಗಜಲ್
ಹಮೀದಾಬೇಗಂ ದೇಸಾಯಿ
ಸಪ್ತತಾರೆಗಳ ಬೆಳಕಿನೊಳು ಇಳೆಗೆ ಇಳಿದೆ ಏಸು ಪ್ರಭುವೇ
ಕೊಟ್ಟಿಗೆಯ ಮೆದು ಹುಲ್ಲಿನಲಿ ಜನ್ಮ ತಾಳಿದೆ ಏಸು ಪ್ರಭುವೇ
ಮುಗ್ಧ ನಗು ಬೀರಿ ಎಲ್ಲರ ಮನ ಸೆಳೆದೆಯಲ್ಲ
ಕಣ್ಣ ಕಾಂತಿಯಲಿ ಜಗದ ಕತ್ತಲೆ ಸೀಳಿದೆ ಏಸು ಪ್ರಭುವೇ
ದೀನ ಶೋಷಿತರ ಆಸರೆಯ ಆಲದ ಮರ ನೀನು
ಕಣ್ಣೀರು ಒರೆಸಿ ನೆಮ್ಮದಿಗೆ ಭರವಸೆಯೆಂದು ತಿಳಿದೆ ಏಸು ಪ್ರಭುವೇ
ಕ್ರೂರಿಗಳು ಕಷ್ಟಗಳಜಾಲವನೇ ಬೀಸಿದರು ನೋಡು
ಶಾಂತಿ ಪ್ರೇಮದ ಬದುಕನು ಬಾಳಿದೆ ಏಸು ಪ್ರಭುವೇ
ಲೋಕದ ಒಳಿತನೇ ಬಯಸಿ ಮುಳ್ಳು ಮುಡಿಗೇರಿಸಿದ ಮಹಾತ್ಮ
ಶಿಲುಬೆಗೇರಿ ಕ್ಷಮೆಯ ಸಂದೇಶವನು ಹೇಳಿದೆ ಏಸು ಪ್ರಭುವೇ..
ಗಝಲ್ ಮೂಲಕ ಚೆಂದದ ಭಾವಾಭಿವ್ಯಕ್ತಿ.. ಅಭಿನಂದನೆಗಳು.
ತುಂಬಾ ಚೆನ್ನಾಗಿದೆ. ಏಸುವಿನ ಗಜಲ್,