ಮಂಜುಳಾ ಬಿ.ವಿಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಇತರೆ

ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ

ಮಂಜುಳಾ ಬಿ.ವಿಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಮಂಜುಳಾ ಬಿ.ವಿ ಅವರು ಭಾರತೀಯ ರೈಲ್ವೆ (ಅಚ್ಚು ಗಾಲಿ) ಯಲ್ಲಿ ಕಿರಿಯ ಅಭಿಯಂತರ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 25 ವರ್ಷಗಳಿಂದ ,ಸಮಾಜ ಸೇವೆ ,ಸಾಹಿತ್ಯ ,ಕನ್ನಡ ಸಂಘಟನೆ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ತಮ್ಮ ಬಳಗದವರೊಂದಿಗೆ ಕರ್ನಾಟಕದ್ಯಾಂತ ಸುಮಾರು 100 ಕ್ಕೂ ಹೆಚ್ಚು ಶಾಲೆಗಳ ಮಕ್ಕಳಿಗೆ ಪಠ್ಯೇತರ ಸಹಕಾರ ,ಅನಾಥಶ್ರಮಗಳಿಗೆ, ಹೆಚ್ ಐ ವಿ ಮಕ್ಕಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.
ಹಲವಾರು ಸಾಹಿತ್ಯಕ ಕಾವ್ಯ ಕಮ್ಮಟ , ಬಹುಭಾಷಾ ಕಮ್ಮಟ , ಸೆಮಿನಾರ್ ಗಳಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ಜಿಲ್ಲಾ ಮಟ್ಟ , ತಾಲೂಕು ಮಟ್ಟದ ಕವಿಗೋಷ್ಟಿಗಳಲ್ಲಿ. ಸರ್ಕಾರಿ ಶಾಲೆಯ ಮಕ್ಕಳಿಗೆ ಚಿತ್ರಕಲೆ ಮುಂತಾದ ಲಲಿತಕಲೆಗಳ ಬಗ್ಗೆ ಜಾಗೃತಿ ಮೂಡಿಸುವ, ಮತ್ತು ವಯಸ್ಕರ ಶಿಕ್ಷಣದ ಯೋಜನೆಯ, ಶಾಲೆ ಬಿಟ್ಟ ಮಕ್ಕಳಿಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತರುವಂತ ಅನೇಕ ಕಾರ್ಯಕ್ರಮದಲ್ಲಿ ಸಹಕಾರ ನೀಡುತ್ತಿದ್ದಾರೆ. ಮಂಜುಳಾ ಅವರಿಗೆ ” ಕನ್ನಡ ಸೇವಾರತ್ನ , ಆದಿಮ ದ ಗದ್ದುಗೆ ಗೌರವ, ಕನ್ನಡದ ಕಣ್ಮಣಿ, ವಿಶ್ವ ಮಾನವ ಕುವೆಂಪು ಪ್ರಶಸ್ತಿ , ವಿವೇಕಾನಂದ ಸದ್ಭಾವನ ಪ್ರಶಸ್ತಿಗಳು ಸಂದಿವೆ. ಮತ್ತು ಹಲವಾರು ಕವನಗಳು ಅಲ್ಲಮ ಪ್ರಕಾಶನ ಮತ್ತು ಕೀರಂ ನುಡಿ ನಮನ ದ ಕವನ ಸಂಕಲನದಲ್ಲಿ, ರೈಲ್ವೆ ಮ್ಯಾಗಜೀನ್ ಗಳಲ್ಲಿ ಪ್ರಕಟಗೊಂಡಿವೆ. ಈಗ ಸಧ್ಯ ಕರ್ನಾಟಕ ಲೇಖಕಿಯರ ಸಂಘದ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ದಲಿತ ವಿದ್ಯಾರ್ಥಿ ಸಂಘವು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಬಾಲಾಜಿ ಎಂ ಕಾಂಬಳೆ ಅವರು ತಿಳಿಸಿದ್ದಾರೆ.


One thought on “ಮಂಜುಳಾ ಬಿ.ವಿಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

Leave a Reply

Back To Top