ಆದಪ್ಪ ಹೆಂಬಾ ಮಸ್ಕಿ-ನನ್ನೊಲುಮೆಯಿಂದಲೆ

ಕಾವ್ಯ ಸಂಗಾತಿ

ನನ್ನೊಲುಮೆಯಿಂದಲೆ

ಆದಪ್ಪ ಹೆಂಬಾ ಮಸ್ಕಿ

ನಾ ನಿನ್ನ ನೆನೆಯದೆ
ಬಾನೊಳು ರವಿ ಉದಯಿಸುವುದಿಲ್ಲ
ನಿನ್ನ ಸವಿನಗೆಯ
ನನ್ನೊಳಗಿನ ಕವಿ ಮರೆಯುವುದೆ ಇಲ್ಲ ||

ಅದೆಷ್ಡು ಸಂಯಮಿ?
ಆ ಸೃಷ್ಟಿಕರ್ತ
ಅಳೆದೂ ತೂಗಿ ನಿನ್ನ ಕಂಗಳಿಗೆ
ಬಣ್ಣ ಬಳಿದ ||

ಸ್ಥಿತಿ ಕಾರಕ ಶಿವ
ಕ್ರೂರಿ ಕೊಂಚ
ನಿನ್ನನ್ನು ನನ್ನಿಂದ
ದೂರವಿಟ್ಟ ||

ಲಯಕಾರಕನ ಆಟ ಕಾಟ
ಶುರುವಾಗೋ ಮುನ್ನ
ಸಾಗರವ ನದಿ ಸೇರುವಂದದಿ
ನಿನ್ನ ನಾ ಸೇರುವಾಸೆ ||

ಮಲ್ಲಿಗೆಯಿಂ ಸಿಂಗರಿಸೊ ಮುನ್ನ
ಕೇಶರಾಶಿಯ ನೇವರಿಸಿ
ಹೊಳೆವ ಕಂಗಳಿಗೊಮ್ಮೆ
ಮಧುರ ಮುತ್ತನಿಡುವಾಸೆ ||

ತಿಂಗಳನು ಸರಿದೊಡನೆ
ವಕ್ಕರಿಸುತಿಹನು ಮಂಗಳ
ಬೇಸರಿದಿರು ನಲ್ಲೆ
ಕಾತರಿಸುತಿಹೆನು ನಾನೂ||

ನೀನಿಲ್ಲದೂರಿನಲಿ ಸ್ವರ್ಗವಿದ್ದರು ಏನು ?
ತಾಳು
ಬಂದು ಸೇರುವೆ ನಾನು
ನಿನ್ನೆದೆಯ ಮಹಲನ್ನು||


4 thoughts on “ಆದಪ್ಪ ಹೆಂಬಾ ಮಸ್ಕಿ-ನನ್ನೊಲುಮೆಯಿಂದಲೆ

Leave a Reply

Back To Top