ಜೋಳದ ರಾಶಿ-ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಜೋಳದ ರಾಶಿ

ತೆನೆ ತುಂಬಿ ತೂಗಾಡುತಿವೆ
ಹಸಿರೇ ಉಸಿರೆನುತಿವೆ
ಹೊನ್ನಿನ ಮಣ್ಣಲ್ಲಿ ನಗುತಿವೆ

ಕಪ್ಪು ಎರೆ ಹೊಲದಲಿ
ಬಿಳಿ ಎತ್ತುಗಳು ದಿನವಿಡೀ
ದುಡಿದು ದಣಿವಾರಿಸಿಕೊಳುತಿವೆ

ಕೊಳವೆ ಭಾವಿಯ ನೀರಿನಲಿ ಮಕ್ಕಳಾಡುತಿವೆ ನಲಿಯುತ
ಎಲ್ಲೆಲ್ಲೂ ಸಂತೋಷವೇ

ಕಣದಲಿ ಮಾಡುತಿರುವರು
ಜೋಳದ ರಾಶಿಯ ಪೂಜೆ
ಹೆಂಗಳೆಯರು ಮಂಗಳಾರತಿ

ಬೆಳಗುತಿಹರು ಸುಖ ಸಮೃದ್ಧಿಯ
ಐಸಿರಿಯ ಸಿರಿ ಧಾನ್ಯಗಳಿಗೆ
ಹಸಿವೆಗೆ ಕಸುವಾಗಲೆನುತ

ರೈತನ ಬೆವರು ಹನಿಗಳೆಲ್ಲಾ
ಮುತ್ತಿನ ಕಾಳಾಗಿವೆಯಲ್ಲಾ
ಕೈ ಮುಗಿಯುತಿದೆ ಬಾಗಿ ಬಾನೆಲ್ಲಾ

ಸಾರ್ಥಕತೆಯ ಧನ್ಯತಾಭಾವ
ಅನ್ನದಾತನ ಮುಖದಲಿ
ವಂದಿಸುತಿಹನು ಭೂತಾಯಿಗೆ


Leave a Reply

Back To Top