ಕಾವ್ಯ ಸಂಗಾತಿ
ಗಜಲ್
ಕವಿತಾ ಹಿರೇಮಠ
ಅರಳಿದ ಮೊಗ್ಗಿನ ಚೆಲುವು ಭಾವನೆಯ ಕರೆಸಿತೇ ಮತ್ತೆ
ಅರಿಯದ ಮನದ ಒಲವು ಕಾವ್ಯವ ಬೆರೆಸಿತೇ ಮತ್ತೆ
ನೊಂದ ಹೃದಯದಲ್ಲಿ ಭರವಸೆ ಚೈತನ್ಯ ಹುಟ್ಟಿತಲ್ಲವೇ
ನೋವುಗಳ ಮರೆಮಾಚಿ ನಗು ನವಿರಾಗಿ ಎರೆಸಿತೇ ಮತ್ತೆ
ಕಾಲಚಕ್ರ ಉರುಳಿದಂತೆ ಅಳುಕು ಮಾಯವಾಗಿ ಹೊಸತ ಕಂಡಿತು
ಕಾಂಚಣದ ಮೋಹ ಕರಗಿ ನೆನೆದ ಪ್ರೀತಿ ಮೆರೆಸಿತೇ ಮತ್ತೆ
ತಳುಕು ಬಳುಕಿನ ಜಗದಲ್ಲಿ ವಂಚನೆ ಮುಖವಾಡ ಬೇಗ ಕಳಚಿತು
ತಮಂಧ ಕಳೆದು ಬಾಳಲಿ ಬೆಳಕು ಖುಷಿಯ ತೆರೆಸಿತೇ ಮತ್ತೆ
ಸದ್ದಿಲ್ಲದೆ ಕವಿಯ ಅನುರಾಗದ ಬಂಧ ಬೆಸೆದುಕೊಂಡಿತು
ಎದೆಯಲ್ಲಿ ಉಳಿದ ಮಾತುಗಳು ಗಜಲ್ ಬರೆಸಿತೇ ಮತ್ತೆ
Wow
ಗಝಲ್ ಚೆಂದಿದೆ..ಅಭಿನಂದನೆಗಳು