ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಮನ್ನಿಸದ ತಪ್ಪು
ಇಲ್ಲಿ ನಾನೆ ಆಕಾಶವಾಣಿ
ನೀನೆ ಶೋತೃ
ನನ್ನೆಲ್ಲ ನಾಳೆಗಳಿಗೆ…
ಅಡ್ಡಗೆರೆಯನ್ನೆಳೆದು
ದೂರ ದೂರವೆಂದು ನಿಲ್ಲುವೆಯಲ್ಲ..!
ಇಷ್ಟೇನಾ ಬದುಕು….
ನಾ ನಿನ್ನೊಳು ನಿಲ್ಲುವಳಲ್ಲ…!!
ಜೇಡಕಟ್ಟಿದ ಬಲೆಯಿಂದ
ಪಾರಾಗಲೆಯಿಲ್ಲ..
ಬಾಂಧವ್ಯದ ಬೆಸುಗೆಯಿದು
ಬಿಗಿಯಾಗಲಿಲ್ಲ…!
ಬಾ ಮತ್ತೊಮ್ಮೆ ಎದೆಯಗೂಡಿಗೆ
ಇರುವ ದಾರಿಯ ಸವೆಸಲಿಲ್ಲ..
ಬಾಳಪಥದ ಸವಿಹೆಜ್ಜೆಯಲಿ
ನಡೆಯಲಾಗಲಿಲ್ಲ….!
ದಿಕ್ತಟದಿ ಪಡುವಣಕೆ
ಸ್ತಬ್ದನಾಗಿ ಅರ್ಕ ಜಾರುತಿಹನು
ದುಂಬಿಯು ಸ್ವಯಂ
ಉರುಳಿಗೆ ಶರಣಾಯಿತು..!
ಆಸೆಗಳ ಕಡಲಿದು ಬತ್ತಿ
ಬರಿದಾಯಿತಲ್ಲ…
ಬಾಳು ನೀರಿಲ್ಲದ
ಕಡಲಾಯಿತು….!
ದುಃಖದ ಬಾಧೆಗಿಂತ
ಕಣ್ಣೋಟದ ಶರಜಾಲ
ಎದೆಯ ಚುಚ್ಚುತ್ತಿದೆ…
ಒಡಲ ಹಪಾಹಪಿಗೊಂದು
ಮೋಕ್ಷಕೊಟ್ಟು
ಬದುಕನ್ನು ಪ್ರೀತಿಸು…?
ಇಲ್ಲವೆ,
ದ್ವೇಷಿಸು…!
ಕೊನೆ ಕ್ಷಣದಲ್ಲಾದರೂ
ಮರಳಿ ಸೇರಿಬಿಡು
ನಿನ್ನ ನೆನಪುಗಳು ಹೂದೋಟದಿ
ಅರಳಿದ ಹೂಗಳಾಗಿವೆ,
ಕನಿಕರಿಸು,
ಒಲವ ಸ್ವೀಕರಿಸು…!
ಪ್ರೇಮದ ಮನವನು
ಸಂತೈಸು…
ಇಲ್ಲವೆಂದರೆ ಧಿಕ್ಕರಿಸು
ತಿಳಿಯದ ಪ್ರಮಾದವ
ಮನ್ನಿಸು…ಮನ್ನಿಸು…!
————[
ಪ್ರೇಮ ನಿವೇದನೆ ಉತ್ತಮ