ಕಾವ್ಯ ಸಂಗಾತಿ
ರಾಹುಲ ಮರಳಿಯವರ ಹೊಸ ಗಜಲ್
ನಭೋ ಮಂಡಲದಲಿ ಅಪ್ಸರೆಯಂತೆ ಇದ್ದವಳು ಸಿಗಲೇ ಇಲ್ಲ
ಪ್ರೀತಿಯ ಅಮಲು ಏರಿಸಿ ನವಿರೇಳಿಸಿ ಮರಳಿ ಬರಲೇ ಇಲ್ಲ
ತಾಮಸದಿ ನಕ್ಷತ್ರಗಳಲಿ ಧ್ರುವ ತಾರೆಯಂತೆ ಕಾಣುವೆ ನೀನು
ಹಗಲಿನಲಿ ಬೆಂಕಿ ಉಂಡಿಯಂತೆ ಪ್ರಕಾಶವಾಗಿ ಕೈಗೆಟುಕಲೇ ಇಲ್ಲ
ಮೋಹಿಸಲು ಬಂದವರ ನಾ ಮೆಚ್ಚಲಿಲ್ಲ ನೀನೇ ನನ್ನ ಮನದ ದೇವತೆ
ನದಿಯಂತೆ ಬಳಕುವ ನೀನು ಸಮುದ್ರ ಸೇರುವ ಬಯಕೆ ಹೇಳಲೇ ಇಲ್ಲ
ಪ್ರೀತಿ ಪ್ರೇಮ ಆಟವಲ್ಲ ಸಿಗದವಗೆ ತಿಳಿದಿದೆ ಜೀವನದ ಪರದಾಟ
ಬಾನಲಿ ನಿನ್ನ ಬಯಸಿ ಚಾತಕ ಪಕ್ಷಿಯಂತೆ ಕಾದಿಹೆ ನೀನು ಕಾಣಲೇ ಇಲ್ಲ
ಸೀತೆ ಪರಮಪವಿತ್ರಳಾದರೂ ರಾಮನಿಗೆ ಸದಾ ಜೊತೆ ಇರಲಾಗಲಿಲ್ಲ
ಜೀವಕವಿಯ ಎದೆಯಲಿ ನೀನಿಟ್ಟ ನೆನಪಿನ ಹೆಜ್ಜೆಗಳು ಅಳಿಸಲೇ ಇಲ್ಲ
ಸೊಗಸಾದ ಕವನ
Very nice
Superb…