ಮಾಜಾನ್ ಮಸ್ಕಿ ಕವಿತೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ ಕವಿತೆ

1.
ತನ್ನನ್ನು ತಾನು ಸುಟ್ಟುಕೊಳ್ಳಬೇಕಲ್ಲ ಎಂದು ದೀಪ ಸ್ವಾರ್ಥಿ ಆಗಿದ್ದರೆ….
ಜಾನ್!!
ನಾವೆಲ್ಲರೂ ಕತ್ತಲೆಯಲ್ಲಿ ಬಾಳಬೇಕಾಗಿತ್ತು.

2.
ಮಿತ್ರ ರೂಪದಲ್ಲಿಯ ಶತ್ರುಗಳು ಶತ್ರುಗಳನ್ನು ಸೇರಿ ನಿನ್ನ ಮೇಲೆ ಪಿತೋರಿ ನಡೆಸುತ್ತಿರುವರು ಎನ್ನುವ ಭಯಬೇಡ
ಜಾನ್!!
ನಿನ್ನಲ್ಲಿ ಅಡಗಿದ ಶಕ್ತಿಯ ಬಲ ತಮ್ಮೊಳಗಿರುವ ಹೇಡಿತನವನ್ನು ಪ್ರದರ್ಶಿಸುತ್ತಿರುವರು.

3.
ಮನದಲ್ಲಿ ಉಲ್ಲಾಸ ಕಂಗಳಲ್ಲಿ ಕನಸುಗಳನ್ನು ಹೊತ್ತು ಸಾಗುತ್ತಿರುವೆಯಾ…
ಜಾನ್!!
ಇನ್ನೊಬ್ಬರು ಇಲ್ಲದ ಆಸರೆಯ ನಿರಾಶೆಯಲ್ಲಿ….

4.
ಕಷ್ಟಗಳನ್ನೇ ಹೊತ್ತು ನಡೆಯಬೇಕಲ್ಲ ಎಂದು ಕೊರಗುವುದು ಏಕೆ?
ಜಾನ್!!
ಬೆಳಕಿನ ಕ್ಷ -ಕಿರಣ ಹರಿತವಾಗಿರುವುದು ಚಿಂತೆ ಬೇಡ.

5.
ಹೋರಾಟ ಹೋರಾಟ ಎಂದು ಹೋರಾಡುತ್ತಿದ್ದೇವೆ ಅಲ್ಲವೇ
ಜಾನ್!!
ಒಳಗಿರುವ ಕ್ರೂರತೆಯನ್ನು ಬಂಧಿಸಿದ್ದೇವೆಯಾ….??!!


Leave a Reply

Back To Top