ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಶಾಲಾ ಶಿಕ್ಷಣದಲ್ಲಿ ಗ್ರಾಹಕರ ಸಂಘ

ಆರ್ಯಾ 6 ನೇಯ ತರಗತಿ ಓದುತ್ತಿರುವ ಪುಟ್ಟ ಹುಡಗಿ. ಅಂದು ಶಾಲೆಗೆ ಹೋಗುವಾಗ ಅವಳು ವಿಶೇಷ ರೀತಿಯಲ್ಲಿ ತಯಾರಿ ಆಗುತ್ತಿರುವದನ್ನು ಕಂಡು ಅವಳ ಅಜ್ಜಿ ಇದೇನು ಇಂದು ಇಷ್ಟೆಲ್ಲಾ ತರಕಾರಿ ತೆಗೆದುಕೊಂಡು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದಳು ಆಗ ಆರ್ಯಾ ಉತ್ತರಿಸುತ್ತಾ ನಮ್ಮ ಶಾಲೆಯಲ್ಲಿ ಇಂದು ಮಕ್ಕಳ ಸಂತೆ ಇದೆ ಅದಕ್ಕೆ ನಾನು ತಕ್ಕಡಿ ಹಾಗೂ ತರಕಾರಿಗಳನ್ನು ತೆಗೆದುಕೊಂಡು ಹೋಗಿ , ಮಾರಾಟ ಮಾಡುತ್ತಿದ್ದೇನೆ ಎಂದಳು. ಅದಕ್ಕೆ ಅಜ್ಜಿಗೆ ಕುತೂಹಲವಾಯಿತು. ಇದನ್ನೂ ಸಹ ನಿಮ್ಮ ಶಾಲೆಯಲ್ಲಿ ಕಲಿಸುತ್ತಾರೆಯೇ? ಎಂದಳು ಆಗ ಆರ್ಯಾ ಹೌದು ಅಜ್ಜಿ ನಮ್ಮ ಶಾಲೆಯಲ್ಲಿ ಗ್ರಾಹಕ ಸಂಘ ಎಂದು ಇದೆ ಅದರಡಿಯಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ.ಅದರಲ್ಲಿ ಮಕ್ಕಳ ಸಂತೆಯೂ ಒಂದು ಎಂದಳು. ಆಗ ಅಜ್ಜಿ ಹಾಗಾದರೆ ನಾನು ಸಹ ನಿಮ್ಮ ಮಕ್ಕಳ ಸಂತೆಗೆ ಬಂದು ವಸ್ತುಗಳನ್ನು ಕೊಳ್ಳುವೆ ಎಂದಳು ಅದಕ್ಕೆ ಆಯಿತು ಅಜ್ಜಿ ನಮ್ಮ ಶಾಲೆಗೆ ಬಾ ಎಂದು ಹೇಳಿ ಶಾಲೆಗೆ ಹೋದಳು.

ಅಜ್ಜಿಯೂ ಸಹ ಶಾಲೆಯತ್ತ ಹೆಜ್ಜೆ ಹಾಕಿದಳು. ಶಾಲೆಗೆ ಹೋದ ಅಜ್ಜಿ ಅಲ್ಲಿ ಮಕ್ಕಳ ಸಂಬ್ರಮ ನೋಡಿ ಸಂತಸ ಪಟ್ಟಳು.ಅನೇಕ ಮಕ್ಕಳು ಹಣ್ಣು, ತರಕಾರಿ, ಪೆನ್ನು, ನೋಟಪುಸ್ತಕ, ತಿನಿಸುಗಳು ಇತ್ಯಾದಿ ವಿವಿಧ ವಸ್ತುಗಳ ಅಂಗಡಿ ಹಚ್ಚುತ್ತಿದ್ದರು. ಆಗ ಅಜ್ಜಿ ತರಕಾರಿ ಕೊಳ್ಳಲು ಹೋಗಿ, ಈ ಟೊಮೆಟೋ ಹೇಗೆ? ಎಂದು ಕೇಳಿದಳು ಅಲ್ಲಿದ್ದ ಆರ್ಯಾ ಇದು ಒಂದು ಕೆ ಜಿ ಗೆ 40 ರೂ ಎಂದಳು ನನಗೆ ಕಾಲು ಕೆ ಜಿ ಬೇಕು ಎಷ್ಟು ಎಂದು ಕೇಳಿದಳು ಅದಕ್ಕೆ ಆರ್ಯಾ 10 ರೂ ಎಂದಳು ಸರಿ ಕೊಡು ಎಂದಾಗ ತಕ್ಕಡಿ ತೆಗೆದು ಅಳತೆ ಮಾಡಿ ಕಾಲು ಕೆ ಜಿ ಟೊಮೆಟೋ ಕೊಟ್ಟಾಗ ಅಜ್ಜಿಗೆ ಅತ್ಯಾನಂದವಾಯಿತು ಮಕ್ಕಳಿಗೆ ತೂಕ ಮಾಡುವುದ, ಲೆಕ್ಕ ಮಾಡುವುದು ಹಾಗೂ  ವ್ಯವಹಾರ ಮಾಡುವುದು ಹೀಗೆ ಎಲ್ಲ ಅನ್ವಯಿಕ ಜ್ಞಾನದ ಈ ಶಾಖೆ ಅತ್ಯದ್ಭುತ ಎನಿಸಿತು. ಈ ರೀತಿ ಗ್ರಾಹಕ ಸಂಘದ ಮೂಲಕ ಮಕ್ಕಳಿಗೆ ವ್ಯವಹಾರವನ್ನೂ ಸಂವಹನದ ಕೌಶಲವನ್ನು ಹೇಳುತ್ತಿರುವುದು ಅಭಿನಂದನೀಯ ಎನಿಸಿತು ಆಗ ಅಜ್ಜಿ ಅಲ್ಲಿದ್ದ ಶಿಕ್ಷಕರ ಕಡೆಗೆ ನೋಡಿ ಒಳ್ಳೆಯ ಸಂಘದ ಚಟುವಟಿಕೆಗಳಿವು ಎಂದಳು. ಆಗ ಶಿಕ್ಷಕರು ಈ ರೀತಿ ಅನೇಕ ಸಂಘಗಳ ಮೂಲಕ ಮಕ್ಕಳಿಗೆ ಅವಶ್ಯಕವಾದ ಪೂರಕ ಜ್ಞಾನವನ್ನು, ಕೌಶಲವನ್ನು ಶಾಲೆಯಲ್ಲಿ ನೀಡುತ್ತಿರುವದನ್ನು ತಿಳಿಸಿದರು. ಆಗ ಅಜ್ಜಿ ಈ ಗ್ರಾಹಕ ಸಂಘದ ರಚನೆ, ಅರ್ಥ, ಉದ್ದೇಶಗಳು ಹಾಗೂ ಚಟುವಟಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ನನಗೂ ತಿಳಿಯುವ ಕುತೂಹಲವಾಗಿದೆ. ಆದ್ದರಿಂದ ತಿಳಿಸಿ ಎಂದಳು. ಆಗ ಶಿಕ್ಷಕಿ ಗ್ರಾಹಕ ಸಂಘದ ಬಗ್ಗೆ ಈ ಕೆಳಗಿನಂತೆ ವಿವರವಾದ ಮಾಹಿತಿ ನೀಡಿದರು.

ಅರ್ಥ : 

ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯ ಮತ್ತು ನೈತಿಕ ಮೌಲ್ಯ ಬೆಳೆಸಿಕೊಳ್ಳಲು, ಹಾಗೂ ಉತ್ತಮ ಜವಾಬ್ದಾರಿ

ನಾಗರಿಕರಾಲು ತಾವೇ ಸ್ಥಾಪಿಸಿರುವ ಸಂಘ. ಈ ಸಂಘದ ಮೂಲಕ ಶಾಲೆಯ ಎಲ್ಲ ವಿದ್ಯಾರ್ಥಿಗಳು ಗ್ರಾಹಕರಾಗಿ ತಮ್ಮ ಹಕ್ಕುಗಳನ್ನು ಅರಿಯಲು ವರ್ಷವಿಡೀ ವಿವಿಧ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿ, ಸಕ್ರೀಯವಾಗಿ ಪಾಲ್ಗೊಂಡು ಗ್ರಾಕಕರ ಶಿಕ್ಷಣ ಪಡೆಯುತ್ತಾರೆ.

ಪ್ರಮುಖವಾದ ಹಕ್ಕುಗಳು

          ಜೀವ ಮತ್ತು ಆಸ್ತಿಗೆ ಅಪಾಯಕಾರಿ ಎನಿಸುವ ಸರಕುಗಳ ಮಾರಾಟ ಮತ್ತು ಸೇವೆಯ ವಿರುದ್ಧ ರಕ್ಷಿಸಿಕೊಳ್ಳುವ ಹಕ್ಕು

(ಸುರಕ್ಷತಾ ಹಕ್ಕು)

          ಅನೈತಿಕ ವ್ಯಾಪಾರ ವಹಿವಾಟುಗಳ ವಿರುದ್ಧ ಗ್ರಾಹಕನನ್ನು ಸಂರಕ್ಷಿಸಲು ಆತ ಸರಕುಗಳು ಅಥವಾ ಸೇವೆಗಳು ಪ್ರಕರಣಗಳಿಗೆ ಸಂಬAಧಿಸಿದAತೆ ಗುಣ, ಗಾತ್ರ, ಸಾಮರ್ಥ್ಯ, ಶುದ್ಧತೆ, ಗುಣಮಟ್ಟ ಮತ್ತು ಬೆಲೆಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು

(ತಿಳಿದುಕೊಳ್ಳುವ ಹಕ್ಕು)

          ಸಾಧ್ಯವಾದೆಡೆಯಲ್ಲೆಲ್ಲ ಬೇರೆ ಬೇರೆ ಆಕರಗಳಿಂದ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಸರಕು ಮತ್ತು ಸೇವೆಗಳನ್ನು ಕೊಳ್ಳುವಂಥ

ಅವಕಾಶವನ್ನು ಸ್ಥಿರಪಡಿಸಿಕೊಳ್ಳುವ ಹಕ್ಕು (ಆಯ್ಕೆ ಹಕ್ಕು)

            ಗ್ರಾಹಕನ ಹಿತಾಸಕ್ತಿಗಳು ಯುಕ್ತ ಪರಿಶೀಲನೆಯನ್ನು ಪಡೆಯುವುವು ಎಂಬುದರ ಬಗ್ಗೆ ಸ್ಥಿರಪಡಿಸಿಕೊಳ್ಳುವ ಮತ್ತು ವಿಚಾರಣೆ ಮಾಡಿಸಿಕೊಳ್ಳುವ ಹಕ್ಕು (ವಿಚಾರಣಾ ಹಕ್ಕು)

          ಅನೈತಿಕ ವ್ಯಾಪಾರ ವಹಿವಾಟುಗಳು ಅಥವಾ ನಿರ್ಬಂಧಿತ ವ್ಯಾಪಾರ ವಹಿವಾಟುಗಳ ಅಥವಾ ಅವ್ಯವಹಾರದಿಂದ ಶೋಷಣೆಗೊಳಗಾಗುವದರ ವಿರುದ್ಧ ಗ್ರಾಹಕರ ತಮ್ಮ ಕುಂದು ಕೊರತೆಗಳನ್ನು ಸಂಬAಧಿಸಿದ ವೇದಿಕೆಗಳಲ್ಲಿ ಪರಿಹರಿಸಿಕೊಳ್ಳುವ

ಹಕ್ಕು (ನಿವಾರಣಾ ಹಕ್ಕು)ಇತ್ಯಾದಿಗಳು ಗ್ರಾಹಕ ಶಿಕ್ಷಣಕ್ಕೆ ಸಂಬAಧಿಸಿದ ಹಕ್ಕುಗಳಾಗಿವೆ.

ಗ್ರಾಹಕರ ಜವಾಬ್ದಾರಿಗಳು

          ಐ ಎಸ್ ಐ ಆಗ್‌ಮಾರ್ಕ ಇರುವ ವಸ್ತುಗಳನ್ನೇ ಖರೀದಿಸುವುದು.

          ಹಾಲ್‌ಮಾರ್ಕ ಇರುವ ಚಿನ್ನಾಭರಣಗಳನ್ನೇ ಖರೀದಿಸಬಹುದು.

          ವಸ್ತುಗಳನ್ನು ಖರೀದಿಸುವಾಗ ತಪ್ಪದೇ ರಶೀದಿಯನ್ನು ಪಡೆಯುವುದು

          ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರವನ್ನು ವಿರೋಧಿಸುವುದು/ಪ್ರಶ್ನಿಸುವುದು.

          ಔಷದಿಗಳನ್ನು ಖರೀಸುವಾಗ ಅವಧಿ ಮುಗಿಯುವ ದಿನಾಂಕ ಹಾಗೂ ಉತ್ಪಾದಕರುಗಳ ವಿವರಗಳನ್ನು ಪರಿಶೀಲಿಸುವುದು.

          ಉತ್ತಮ ಹಾಗೂ ಪರಿಶುದ್ಧ ಪರಿಸರವನ್ನು ಕಾಪಾಡುವುದು.

          ಅಡಿಗೆ ಅನಿಲದ ಸಮರ್ಪಕ ಹಾಗೂ ಎಚ್ಚರಿಕೆಯ ಬಳಕೆ.

          ಯಾವುದೇ ವಸ್ತುವಿನ ಖರೀದಿ ಅಥವಾ ಸೇವೆಯನ್ನು ಪಡೆಯುವ ಬಗ್ಗೆ ಅನುಮಾನ ಬಂದಲ್ಲಿ ಪ್ರಶ್ನೆಮಾಡಿ

ಅನುಮಾನ ಪರಿಹರಿಸಿಕೊಳ್ಳವುದು.

          ರಸ್ತೆ ಸಾರಿಗೆ/ರೈಲುಗಳಲ್ಲಿ ಸಂಚರಿಸುವಾಗ ತಪ್ಪದೇ ನಿಗದಿತ ಟಿಕೇಟ್ ಪಡೆದು ಪ್ರಯಾಣಿಸುವುದು.

ಗ್ರಾಹಕರ ಜಾಗೃತಿ

          ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು

ಮಾಪನ ಶಾಸ್ತç ಇಲಾಖೆಗಳು

•          ನ್ಯಾಯಬೆಲೆ ಅಂಗಡಿಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರಿಗೆ/ಪಡಿತರ ಚೀಟಿದಾರರಿಗೆ ದೊರೆಯುವ ಆಹಾರಧಾನ್ಯಗಳ ಹಾಗೂ ಸೀಮೆಎಣ್ಣೆಯ ಬಗ್ಗೆ ನಿರ್ವಹಣೆ ಮತ್ತು ಮಾಹಿತಿಗಳನ್ನು ನೀಡುತ್ತಿದೆ.

•          ಸಮರ್ಪಕ ಅಡುಗೆ ಅನಿಲದ ವಿತರಣೆ ಬಗ್ಗೆ ನಿರ್ವಹಣೆ ಮಾಡುತ್ತಿದೆ.

•          ಪರಿಶುದ್ಧ (ಕಲಬೆರಕೆ ರಹಿತ) ಖಾದ್ಯ ತೈಲ, ಪೆಟ್ರೋಲ್, ಡೀಸಲ್, ಆಯಿಲ್, ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು

          ಶೋಷಿತ ಅಥವಾ ಮೋಸಕ್ಕೆ ಒಳಗಾದ ಗ್ರಾಹಕರ ಜಿಲ್ಲಾ, ರಾಜ್ಯ ಹಾಗೂ ರಾಷ್ಟç ಮಟ್ಟದ ಗ್ರಾಹಕರ ವೇದಿಕೆಗಳಲ್ಲಿ

ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. ಅಲ್ಲಿ ಅತೀ ಕಡಿಮೆ ಕೋರ್ಟ ಫೀ ಇರುತ್ತದೆ.

          ದೂರುಗಳನ್ನು ಸಲ್ಲಿಸಲು ವಕೀಲರ ಅವಶ್ಯಕತೆ ಇರುವುದಿಲ್ಲ. ಬಿಳಿ ಹಾಳೆಯಲ್ಲಿ ದೂರನ್ನು ಸಲ್ಲಿಸಬಹುದು.

          ಅವಶ್ಯಕತೆ ಇದ್ದಾಗ ಮಾತ್ರ ವಸ್ತುಗಳನ್ನು ಖರೀದಿಸಿ, ಆಕರ್ಷಕ ಜಾಹಿರಾತುಗಳಿಗೆ ಮೋಸ ಹೋಗಿ ಖರೀದಿ ಮಾಡಬೇಡಿ.

          ತೂಕ ಮತ್ತು ಅಳತೆಯ ಸಾಧನಗಳು ಆಯಾ ಸಾಲಿನಲ್ಲಿ ಇಲಾಖೆಯವರಿಂದ ಪರಿಶೀಲಿಸಿ ಮುದ್ರೆ ಹಾಕಿರುವುದನ್ನು

ಖಚಿತಪಡಿಸಿಕೊಳ್ಳಿ

          ಇಲಾಖೆಯ ಮುದ್ರೆಯು ತೂಕ ಮತ್ತು ಅಳತೆ ಸರಿಯಾಗಿರುವುದಕ್ಕೆ ಸಾಕ್ಷಿ.

          ಅಡಿಗೆ ಅನಿಲದ ಸಿಲಿಂಡರ್ ೧೪.೨ ಕಿ. ಗ್ರಾಂ ಅನಿಲದ ಜೊತೆಗೆ ಅದರ ಮೇಲೆ ನಮೂದಿಸಿರುವಷ್ಟು ತೂಕವಿರಬೇಕು.

ನೀವು ಅಪೇಕ್ಷೆಪಟ್ಟಲ್ಲಿ ಅನಿಲದ ಸಿಲಿಂಡರ್ ಸರಬರಾಜು ಮಾಡುವಾಗ ತೂಕ ಪರಿಶೀಲಿಸಬೇಕು.

          ಪೆಟ್ರೋಲ್/ ಡೀಸಲ್ ಕೊಳ್ಳುವಾಗ ಸ್ವಿಚ್ ಹಾಕಿದ ತಕ್ಷಣ ಮೀಟರ್ ’ (ಸೊನ್ನೆ) ಸಂಖ್ಯೆ ತೋರಿಸುವುದನ್ನು

ಖಾತ್ರಿಪಡಿಸಿಕೊಳ್ಳಬೇಕು.

          ಆಟೋರಿಕ್ಷಾ ಅಥವಾ ಟ್ಯಾಕ್ಷಿಯಲ್ಲಿ ಪ್ರಯಾಣಿಸುವಾಗ ಅಲ್ಲಿರುವ ಮೀಟರ್ ಸೀಲ್ ಆಗಿರುವುದನ್ನು ಪರಿಶೀಲಿಸಿ ಹಾಗೂ ಪ್ರಾರಂಭದಲ್ಲಿ ಮೀಟರ್ ಕನಿಷ್ಟದರ ಮಾತ್ರ ತೋರಿಸುವುದನ್ನು ಖಚಿತಪಡಿಸಿಕೊಳ್ಳಿ.

          ಚಿನ್ನ/ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಕೊಳ್ಳುವಾಗ ತೂಕದ ಯಂತ್ರದ ಮೇಲಿರುವ ಫ್ಯಾನ್(ಪಂಕ) ನಿಲ್ಲಿಸಲು ತಿಳಿಸಿ. ಇಲ್ಲದಿದ್ದಲ್ಲಿ ತೂಕ ಬದಲಾಗಬಹುದು

          ಸೀಮೆ ಎಣ್ಣೆ ಕೊಳ್ಳುವಾಗ ನೊರೆ ನಿಂತ ಮೇಲೆ ತುಂಬಿರುವುದನ್ನು ಪರಿಶೀಲಿಸಿ.

          ತಂಪು ಪಾನೀಯ/ಹಣ್ಣಿನರಸದ ಪಾನೀಯಗಳ ಬಾಟ್ಲಿಗಳ ಮೇಲೆ/ಪ್ಯಾಕ್ ಮಾಡಿದ ತೈ¯ ಪಾಕೆಟ್‌ಗಳ ಮೇಲೆ ಗರಿಷ್ಟ

ಮಾರಾಟ ಬೆಲೆಯನ್ನು ಸ್ಟಿಕ್ಕರ್ ಮೂಲಕ ನಮೂದಿಸದೆ ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.

          ಕಾಳ ಸಂತೆಯಲ್ಲಿ ಖರೀದಿಸಬೇಡಿ.

          ನಕಲಿ ವಸ್ತುಗಳ ಬಗ್ಗೆ ನಿಗಾವಹಿಸಿ ತಯಾರಕರಿಗೆ ಮಾಹಿತಿ ನೀಡಿ.

          ಔಷದ ಹಾಗೂ ತಿನ್ನುವ ವಸ್ತುಗಳ ಮೇಲಿನ ಅವಧಿ ಕೊನೆಗೊಳ್ಳುವ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿ

ರಚನೆ :

ಮುಖ್ಯ ಶಿಕ್ಷಕರು ಗೌರವ ಅಧ್ಯಕ್ಷರಾಗಿ, ಕಲಾ ಶಿಕ್ಷಕರು ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ,

ಕಾರ್ಯದರ್ಶಿ, ಹಾಗೂ ಸದಸ್ಯರಾಗಿ ಸಂಘದ ಚಟುವಟಿಕೆಗಳನ್ನು ನಡೆಸುತ್ತಾರೆ.

ಉದ್ದೇಶಗಳು :

          ಉತ್ಪಾದಕರು ಹಾಗೂ ವ್ಯಾಪಾರಿಗಳಿಂದ ರಕ್ಷಣೆ

          ಗ್ರಾಹಕ ಸಂರAಕ್ಷಣಾ ಕಾಯ್ದೆಯ ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಪ್ರಾಶಸ್ತö್ಯ ನೀಡುವುದು

          ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು

          ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು

          ಗುಣಮಟ್ಟ, ಅಳತೆ,ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು

          ಬಳಕೆದಾರರು ತಾವು ಖರೀದಿಸುವ ವಸ್ತು ಅಥವಾ ಸೇವೆಗಳಿಂದ ತೊಂದರೆಗೆ ಒಳಗಾದಲ್ಲಿ ಅವರ ಸಮಸ್ಯೆಗೆ ಪರಿಹಾರ ತಿಳಿಸುವುದು

          ಗ್ರಾಹಕ ಶಿಕ್ಷಣ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು

          ಕಲಬೆರಿಕೆಯ ಬಗ್ಗೆ ತಿಳವಳಿಕೆ ಮೂಡಿಸುವುದು

          ಮಾಹಿತಿ ಪಡೆಯುವ ಹಕ್ಕು, ವಸ್ತುಗಳ ಆಯ್ಕೆಯ ಹಕ್ಕು, ವಸ್ತುಗಳ ಬಗ್ಗೆ ಆಲಿಸುವ ಹಕ್ಕು, ಶೋಷಣೆಯ ವಿರುದ್ಧ ಪರಿಹಾರ ಕೇಳುವ ಹಕ್ಕು, ಗ್ರಾಹಕ ಶಿಕ್ಷಣ ಹಕ್ಕು, ವಂಚನೆ ಅಥವಾ ಮೋಸದ ವಿರುದ್ಧದ ಹಕ್ಕು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು

          ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಹಾಗೂ ಪರಿಸರ ಸಂರಕ್ಷಣೆಯ ಅಗತ್ಯವನ್ನು ತಿಳಿಸುವುದು.

          ಸಾಮಾಜಿಕ ಪಿಡುಗುಗಳ ಬಗ್ಗೆ ತಿಳಿಸಿ, ಜಾಗೃತಿಯನ್ನು ಮೂಡಿಸುವುದು. ಹಾಗೂ ಅವುಗಳ ಪರಿಹಾರಕ್ಕೆ ಶ್ರಮಿಸಲು ಅಣಿಗೊಳಿಸುವುದು.

          ಮಾನವೀಯ ಮೌಲ್ಯಗಳನ್ನು ಬೆಳೆಸುವುದು.

          ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು.

          ಮೂಲಭೂತ ಹಕ್ಕುಗಳು, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.

          ಮೂಲಭೂತ ಕರ್ತವ್ಯಗಳನ್ನು ತಿಳಿಸಿ ಅವುಗಳನ್ನು ಚಾಚೂ ತಪ್ಪದೇ ನಿರ್ವಹಿಸಲು ಸೂಚಿಸುವುದು.

          ಉತ್ತಮ ಮತ್ತು ಜವಾಬ್ದಾರಿ ನಾಗರಿಕನಾಗಲು ಮಾರ್ಗದರ್ಶನ ಮಾಡುವುದು

ಚಟುವಟಿಕೆಗಳು :

•          ವಸ್ತುಗಳ ಗುಣಮಟ್ಟಗಳ ಬಗ್ಗೆ ತಿಳವಳಿಕೆ ನೀಡುವುದು

•          ಕಲಬೆರಕೆಯ ಬಗ್ಗೆ ಜಾಗೃತಿ ಮೂಡಿಸುವುದು

•          ಗ್ರಾಹಕರ ಸಂರಕ್ಷಣಾ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು

•          ಪ್ರಚಲಿತ ವಿದ್ಯಮಾನದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು

•          ಮೆಟ್ರಿಕ್ ಮೇಳ ಕಾರ್ಯಕ್ರಮ ಏರ್ಪಡಿಸುವುದು

•          ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸುವುದು

•          ನಿಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದು.

•          ಭಾಷಣ, ಚರ್ಚಾಸ್ಪರ್ಧೆ, ಮತ್ತು ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು.

•          ಮಕ್ಕಳ ಸಂತೆÀ ಚಟುವಟಿಕೆಗಳನ್ನು ಏರ್ಪಡಿಸುವುದು.

ಒಟ್ಟಾರೆಯಾಗಿ ಗ್ರಾಹಕರಿಗೆ ಹೆಚ್ಚಿನ ಅಧಿಕಾರ. ಹಕ್ಕುಗಳ ಚಲಾವಣೆ, ಪರಿಹಾರಗಳ ನಿರ್ವಹಣೆ, ದೇಶದ ಸಂಪತ್ತಿನ ವಿತರಣಾ ಸರಪಳಿಯ ಕೊನೆಯ ಕೊಂಡಿ ಬಳಕೆದಾರ ಎಂಬುದನ್ನು ತಿಳಿಸಬೇಕಿದೆ. ಅಲ್ಲದೇ ಗ್ರಾಹಕರೇ ದೇವರುಗಳು ಎಂಬ ಹೇಳಿಕೆಯಂತೆ, ಗ್ರಾಹಕರು ನಮ್ಮನ್ನು ಅವಲಂಬಿಸಿಲ್ಲ, ನಾವು ಅವರನ್ನು ಅವಲಂಬಿಸಿದ್ದೇವೆ. ಅವರು ನಮ್ಮ ಕೆಲಸಕ್ಕೆ ಅಡಚಣೆ ಅಲ್ಲ, ನಮ್ಮ ಕೆಲಸದ ಉದ್ದೇಶವೇ ಅವರು. ಅವರ ಸೇವೆ ಮಾಡುವದರ ಮೂಲಕ ಅವರಿಗೆ ನಾವು ಉಪಕಾರ ಮಾಡುತ್ತಿಲ್ಲ. ಬದಲಾಗಿ ಅವರ ಸೇವೆ ಮಾಡುವ ಅವಕಾಶಕೊಟ್ಟು ಅವರೇ ನಮ್ಮ ಉಪಕಾರ ಮಾಡುತ್ತಿದ್ದಾರೆ ಎಂಬ ಮಹಾತ್ಮಾ ಗಾಂಧೀಜಿ ಹೇಳಿಯನ್ನು ಅರ್ಥೈಸುತ್ತಿದ್ದೇವೆ. ಒಟ್ಟಾರೆ ಗ್ರಾಹಕರೇ ರಾಜರು ಎಂಬ ಪರಿಕಲ್ಪನೆಯನ್ನು ಮಕ್ಕಳು ತಿಳಿಯಬೇಕಿದೆ ಎಂದರು.

            ಅಜ್ಜಿ ಈ ಮಾತನ್ನು ಕೇಳಿ ಅತಿ ಸಂತೋಷದಿಂದ ಗ್ರಾಹಕ ಸಂಘದ ಮೂಲಕ ಉತ್ತಮವಾದ ಶಿಕ್ಷಣ ಶಾಲಾ ಶಿಕ್ಷಣದಲ್ಲಿ ಸಿಗುತ್ತಿದೆ ತಮಗೆ ಧನ್ಯವಾದಗಳು ಎಂದು ಕೇಳಿ ಮನೆಯ ಕಡೆಗೆ ಹೆಜ್ಜೆ ಹಾಕಿದಳು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

One thought on “

Leave a Reply

Back To Top