ಡಾ.ಶಶಿಕಾಂತ.ಪಟ್ಟಣ-ಪುಟ್ಟ ಅಂಗಡಿ

ಕಾವ್ಯ ಸಂಗಾತಿ

ಪುಟ್ಟ ಅಂಗಡಿ

ಡಾ.ಶಶಿಕಾಂತ.ಪಟ್ಟಣ

ಮತ್ಸರದ ಮಾರುಕಟ್ಟೆ
ದ್ವೇಷ ಕೋಪ ಹಿಂಸೆ
ಕೋಮು ಗಲಭೆ ವಿಲೇವಾರಿ.
ಅಲ್ಲಿ ನನ್ನದೊಂದು
ಪುಟ್ಟ ಅಂಗಡಿ.
ಮಮತೆ ಪ್ರೀತಿ ವಾತ್ಸಲ್ಯ
ಬೆಲೆ ಕಟ್ಟಲಾಗದ
ವಸ್ತುಗಳು ವಿನಿಮಯ
ಲಾಭವಿಲ್ಲ ನಷ್ಟವಿಲ್ಲ.
ದುಡ್ಡು ಕಾಂಚಾಣ
ತಿಜೋರಿಗೆ ಬೀಗವಿಲ್ಲ .
ವ್ಯಾಪಾರ ಗಳಿಕೆಯಲ್ಲ .
ಅಳುವು ಆತಂಕ
ಬಿಕ್ಕು ವೇದನೆ
ದುಃಖದ ಮಡುವು ಮಧ್ಯೆ .
ನನ್ನ ನಗೆ ಉಚಿತ .
ಹಸ್ತ ಲಾಘವ ಅಪ್ಪುಗೆ
ಧೈರ್ಯದ ಭರವಸೆ
ಹೆಜ್ಜೆ ಹಾಕುವುದು
ಮನುಜ ಪಥಕ್ಕೆ
ಬುದ್ಧ ಬಸವರ ಪಥಕೆ.

4 thoughts on “ಡಾ.ಶಶಿಕಾಂತ.ಪಟ್ಟಣ-ಪುಟ್ಟ ಅಂಗಡಿ

Leave a Reply

Back To Top