ಯಥಾರ್ಥ ಮಮತಾ ಶಂಕರ್ ಕವಿತೆ

ಕಾವ್ಯ ಸಂಗಾತಿ

ಮಮತಾ ಶಂಕರ್

ಯಥಾರ್ಥ

ಮತ್ತೆ ಮೇಲೆದ್ದು ಓಡಲಾಗದಂತೆ
ಮುಗ್ಗರಿಸಿ ಬಿದ್ದಿದೆ ಕುದುರೆ
ನೂರು ಅಶ್ವಶಕ್ತಿ ಬಲದ ಕಾಲುಗಳಲ್ಲೀಗ
ಕೀಲು ಕೀಲುಗಳಲ್ಲಿ ನೋವಿನ ಗುಳ್ಳೆಗಳು
ತಂದೊಡ್ಡಿದೆ ಮುಂದೋಡಲಾಗದ ಅಸಹಾಯಕತೆ

ಚೆಂದಾಗೇ ತಿಂದು ಬೆಳೆದ ದೇಹ
ಮಾಲೀಶು ಮೈ ಮಿರಮಿರನೆ ಮಿಂಚು
ನಯವಾದ ಬಾಲ
ಆತ್ಮ ವಿಶ್ವಾಸದ ಕಣ್ಣು

ತಾಲೀಮು ನಡೆದದ್ದು ಸಮತಟ್ಟು ಜಾಗ
ರಂಗಕ್ಕೆ ಬಂದಾಗ ಅಂಗಳವೇ ಭಿನ್ನ
ಛಲ ಕಲಿತ ಕುದುರೆ
ದಾಟುತ್ತ ಬಂತು ಕಲ್ಲುಮುಳ್ಳಿನ ಹಾದಿ
ಕನಸಿತ್ತು ನಾಗಾಲೋಟದ್ದು
ಜಗವೆಲ್ಲ ಅಂಗೈಗೆ ಎನ್ನುವಂತದ್ದು ….

ಇಳಿಜಾರಿನ ಆಟ
ಓಡಿದ್ದು ಓಟ
ಕಲಿತಷ್ಟು ಪಾಠ
ಅಚಾನಕ್ಕು ಹೊಡೆತ
ಆಯ ತಪ್ಪಿ ಪೆಟ್ಟು
ಕಣ್ಣಲ್ಲಿ ವೇದನೆ
ಮೈಯಲ್ಲಿ ಅಸಹಾಯಕತೆ

ಮಾಲೀಕನಿಗೋ ಅದನ್ನು
ಜರೂರಾಗಿ ಎಲ್ಲಿ ಸಾಗಹಾಕಬೇಕೆಂಬುದೇ ಚಿಂತೆ ಈಗ…

ಕುದುರೆ ಓಡಲಾರದು ಎಂಬುದಷ್ಟೇ
ಸದ್ಯದ ಸತ್ಯ….


16 thoughts on “ಯಥಾರ್ಥ ಮಮತಾ ಶಂಕರ್ ಕವಿತೆ

    1. ಎಂದಿನ ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಹಮೀದಾ ಮೇಡಂ

  1. ಎಂದಿನ ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಹಮೀದ ಮೇಡಂ

  2. ಅದ್ಭುತ ಜೀವನದ ಗೆಲುವು ಸೋಲನ್ನು ಮಾರ್ಮಿಕ ವಾಗಿ ಕಟ್ಟಿದ್ದಿರಾ ಧನ್ಯವಾದಗಳು ಮೇಡಂ

    1. ಧನ್ಯವಾದ ಗಳು ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ

Leave a Reply

Back To Top