ಕಾವ್ಯ ಸಂಗಾತಿ
ಛಲ
ರೋಹಿಣಿ ಯಾದವಾಡ
ನನ್ನದು ಛಲದ ಬದುಕು
ಬರಡು ಭೂವಿಯಲ್ಲೂ
ಮೊಳಕೆ ಒಡೆದು ಜಗಕೆ
ಚಿಗುರಿ ತೋರುವ ಛಲ
ತುಳಿದಷ್ಟು ಹೂತು ಆಳಕೆ
ಹೋಗುವಳು ನಾನಲ್ಲ ತಿಳಿ
ನೆಲಕಚ್ಚಿ ಮೇಲೆಳುವ ಛಲವು
ನನ್ನಲಿಹುದು ಎಂಬುದ ತಿಳಿ
ಬೇಕಿಲ್ಲೆನಗೆ ಮಣ್ಣು ನೀರು
ಗೊಬ್ಬರ ಇತ್ಯದಿಗಳ ಗೊಡವೆ
ಕಲ್ಲಲ್ಲೂ ನೆಲೆ ಕಾಣುವ
ಜೀವನೋತ್ಸಾಹ ನನ್ನಲಿ
ಗಾಳಿ ಸೊಡರಿಗೆ ಉದುರದೆ
ಗಟ್ಟಿತನದಿ ಊರಿನಿಂತು
ನನ್ನತನವ ತೋರಿ ಮೆರೆವ
ಅಚಲ ಛಲ ನನ್ನದು.