ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ಗುಬ್ಬಚ್ಚಿ

ಕಾವ್ಯ ಸಂಗಾತಿ

ಗುಬ್ಬಚ್ಚಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಹಾರಿ ಬಂತು ಗುಬ್ಬಿ ಮರಿ
ಬಿದ್ದ ಅಕ್ಕಿ ತಿನ್ನಲು ಅಂಗಳದಿ

ಅದಕಾಗಿ ಕಾಯುತ ಕುಳಿತಿದ್ದ
ಅಕ್ಕಿ ಹಾಕುತ ಸಾಯಿರಾಜ

ಗುಬ್ಬಚ್ಚಿಯ ಸಂಗ ಬಯಸಿದ
ಅದರ ಕಾಲಿಗೆ ದಾರ ಕಟ್ಟಿದ

ದಾರವನು ಕಲ್ಲಿಗೆ ಕಟ್ಟಿದ
ಹಾರಲಾರದ ಮರಿ ಅಳುತ್ತಿತ್ತು

ತಾಯಿ ಹಾರಿ ಬಂದು ಕಂದನ
ಕಿವಿಯಲಿ ಉಸಿರಿತು ಮಾತೊಂದ

ಕಲ್ಲಿಗಿಂತ ಕಠಿಣ ನಿನ್ನ ಚುಂಚು
ಕಚ್ಚಿ ಹಾಕು ದಾರ ಹುಚ್ಚು ಮರಿ

ತಾಯ ಮಾತು ಕೇಳಿ ನಕ್ಕಿತು
ತನ್ನೊಳಗಿನ ಶಕ್ತಿ ಬಳಸಿತು

ಆತ್ಮ ನಿರ್ಭರತೆಯಿಂದ ಮೇಲೆ
ಎತ್ತರಕೆ ಹಾರಿ ತಾಯ ಸೇರಿತು

ಹಾರುವಾಗ ಕಿವಿಮಾತು ಹೇಳಿತು
ಸಾಯಾರಾಜಗೆ ಕಟ್ಟಿಹಾಕಬೇಡ

ನನ್ನವ್ವ ಕಲಿಸಿರುವಳು ನೀತಿ
ನೀನೆಂದರೆ ನನಗೂ ಪ್ರೀತಿ

ನಿತ್ಯವೂ ನನಗಾಗಿ ನೀರಿಡುವೆ
ತಿನ್ನಲಿಡುವೆ ಧನ್ಯವಾದ ನಿನಗೆ

ನನ್ನ ಸ್ವಾತಂತ್ರ್ಯ ಕಸಿಯಬೇಡ
ಮತ್ತೆ ಬರುವೆ ನೀ ತೋರಿಸು ಪ್ರೀತಿ


Leave a Reply

Back To Top