ಕಾವ್ಯ ಸಂಗಾತಿ
ಟಂಕಾ
ಹುಳಿಯಾರ್ ಷಬ್ಬೀರ್
೧) ನಿನ್ನೊಲವಿನ
ಮನದ ನಿಲ್ದಾಣದ
ಪ್ರಯಾಣಿಕ ನಾ
ಖಾಯಂಗೊಳಿಸಿ ಬಿಡು
ಜೊತೆಯೇ ಓಡಾಡಲು
೨) ಇಶಾರ ಇತ್ತು
ಮುಶಾಯಿರಾಗಳಲ್ಲಿ
ಕರಗುವುದು
ಎದೆಯ ಭಾವದಲ್ಲಿ
ಒಲವಾಗುವುದೆಂದು
೩) ಖಾಯಂ ಸಹಿಗೆ
ಮನಸ್ಸಿನಲ್ಲಿರುವ
ಖಾಸಗಿ ಪುಟ
ಹಂಬಲಿಸುತ್ತಿದ್ದದ್ದು
ಬೆಂಬಲಿಸುವುದಣ್ಣಾ
೪) ಅಂದದ ಹೆಣ್ಣು
ನೂರಾರು ಮನಸ್ಸಿನ
ಹದ್ದಿನ ಕಣ್ಣು
ಹೆಣ್ಣು ಹೆಣ್ಣಾಗಿ ನೋಟ
ಪತಿವ್ರತೆಯ ಧ್ಯಾನ
೫) ಇರುಳಿನಲಿ
ಚಂದ್ರಮನ ಚಕ್ಕಂದ
ನಗುವಿನಲೆ
ತೇಲಿ ಬರುತಲಿತ್ತು
ಚುಕ್ಕಿಗಳ ಗುಂಪಿಂದ.