ಕಾವ್ಯ ಸಂಗಾತಿ
ಒಲವ ಪರಿ
ಡಾ.ಯ.ಮಾ.ಯಾಕೊಳ್ಳಿ
ಒಲವು ಇರದ ಹಾಡಿಗೆ
ತಾಳ ತಂತಿ ಕೂಡದು
ಸಮರಸದ ಸರಿಗಮ
ಎಂದೂ ತಾನು ಹೊರಡದು
ತಂತಿ ಮೇಲಿನ ಹೆಜ್ಹೆ ತಾನು
ಎಚ್ಚರಿಕೆಯಲಿ ನಡೆವುದು
ಪ್ರೀಯಂದರೆ ಅಲ್ಲ ಸದರ
ಯೋಚಿಸಿ ಹೆಜ್ಜೆ ಇಡುವುದು
ಕಲ್ಲು ಮುಳ್ಳು ಇರದ ದಾರಿ
ಎಲ್ಲಿ ತಾನೆ ಸಿಗುವುದು
ನಡೆಯಬೇಕು ಎಂದರೆ
ಎಲ್ಲ ಸಹಿಸಿ ನಡೆವುದು
ಒಲಿದ ಮೇಲೆ ಬಿಡುವ ಮಾತು
ಎಂದೂ ತಾ ಬರಬಾರದು
ಕೂಡಿ ಇಡುವ ಹೆಜ್ಹೆಯಲ್ಲಿ
ದಾರಿ ಬೇರ್ಪಡಬಾರದು
ಒಲುಮೆ ಎಂಬುದು ಪುಣ್ಯ
ಎನಿತು ಅಸಡ್ಡೆ ಸಲ್ಲದು
ನಡೆವ ದಾರಿ ಗಟ್ಡಿಯಿರಲು
ದೈವ ತಾ ಹರಸುವುದು