ಕಾವ್ಯ ಸಂಗಾತಿ
ತಿರುವು
ನಿಶೆ
ಬೇರೆ ದಾರಿಯಿಲ್ಲ ನನಗೆ
ದಿನವೂ ಅದೇ ಆ ತಿರುವಿನಲ್ಲಿ ಹೊರಡದೆ
ತಿರುವು ಬೇಕೆಂದು ಬದುಕ ಬದಲಾವಣೆಗೆ
ಹುಡುಕಿಕೊಂಡ ಮೇಲೆ ನಡೆಯಬೇಕು
ತಿರುವಿನಲ್ಲಿರುವ ಆ ಮನೆ ಮತ್ತಾ ಗಾಜು
ಹಾಕದ ಎರಡೇ ಸರಳಿನ ಕಿಟಕಿಯ ಒಳ ಹೊರ
ಗಾಳಿ ಮುಂಗುರುಳು ತೀಡಿ ಬಿಸಿಯುಸಿರು
ಬೆವರಾಗಿ ಬದಲಾದ ಸರ ಭರ ಸದ್ದು
ಅಲ್ಲಿಂದಲೆ ಕಣ್ಣು ಹಾಸಿ ಕಳೆದ
ಒಂದಿಡಿ ರಾತ್ರಿಯ ನೋಟ ಚಿತ್ತಾರವಾಗಿ
ಈಗಲೂ ಹಾಗೆ ಇದೆ ಆ ಗೋಡೆಯ ತುಂಬಾ
ಅದೆಂತಹ ಹಿತ ಅದ ಸಂಧಿಸುವುದು
ಹಾಜರಿ ತಪ್ಪದ ದಿನದ ದಿನಚರಿಯದು
ಸಮುದ್ರದೆದುರು ಸೆಳೆತವೊಂದೆ ಆಯ್ಕೆ
ಭಯ ಹುಟ್ಟಿಸುವ ಅದರಲೆಗಳಲಿ
ಕಾಲು ತೋಯಿಸಿಕೊಂಡ ಘಳಿಗೆ
ಇಳಿದಿಳಿದು ಪಾತ್ರವಾಗುವ ಹೆಬ್ಬಯಕೆ
ನಡೆಯುತ್ತೇನೆ ನಡದೇ ಇಲ್ಲಾ ಏನೂ
ಎಂಬಂತೆ ಸುಮ್ಮನೆ ಅವನು ಬಿಟ್ಟು ಹೋದ
ಹಾದಿಯೊಂದಿಗೆ ನನ್ನನೂ ತಿರುವಿಗೆ ಒಪ್ಪಿಸಿ
ಪಯಣ ಎಂದೂ ಭಾರವೆನಿಸದು
Super lines