ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಹಸಿ ಮಣ್ಣಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಒಲವ ಬೇಡಿದೆ ನೀನು
ಹುಸಿ ಮುನಿಸಿನ ಬೇಸರದಲಿ ಆಟವ ಕೆಡಿಸಿ ಛಲದಿ ಕಾಡಿದೆ ನೀನು
ಪ್ರೇಮದ ಬಿಕ್ಷೆ ಕೇಳುವ ನೆಪದಲಿ ಹುಡುಕಿಕೊಂಡು ಬಂದು ನಿಂದೆಯಲ್ಲವೇ
ಕ್ಷೇಮದಿ ರಕ್ಷೆಯ ನೀಡಿ ಜಪವ ಮಾಡುತ ಬೇಗುದಿ ನೀಗಿ ತೀಡಿದೆ ನೀನು.
ಬದುಕಿನ ಬಂಡಿಯಲಿ ಬೆರೆತು ಸಾಗುವುದೇಅನಿರ್ವಚನೀಯ ಆನಂದ
ಕೆದುಕುದ ಬಿಟ್ಟು ಮರೆತು ಬಾಳುವುದ ಕಲಿಸುತ ಮೋಡಿ ಮಾಡಿದೆ ನೀನು
ಅಂತರಂಗದ ಆಳ ಅರಿತು ಜೊತೆಗೆ ಹೆಜ್ಜೆ ಸೇರಿಸುತ ನಡೆದವರಲ್ಲವೆ
ರಂಗೀನ ಕನಸುಗಳಿಗೆ ತಾಳ ಹಾಕುತ ಎದೆಯ ಹಾಡಿಗೆ ಮಿಡಿದೆ ನೀನು
ಬರುವ ಕಷ್ಟಕಾರ್ಪಣ್ಯಗಳಿಗೆ ಹೆದರದೆ ಮುನ್ನಡೆವಳು ಈ ಜಯಾ.
ಇರುವೆ ನಷ್ಟಗಳೆಷ್ಟೆ ಸಂದರು ಎನುತ ಸನ್ನಡತೆಯ ಉಸಿರ ನೀಡಿದೆ ನೀ
Beautiful ❤️