ಟಿ.ದಾದಾಪೀರ್ ತರೀಕೆರೆ ಕವಿತೆ -ಮಹಲ್‌ಗು ಮೀರಿದ್ದು

ಕಾವ್ಯ ಸಂಗಾತಿ

ಮಹಲ್‌ಗು ಮೀರಿದ್ದು

ಟಿ.ದಾದಾಪೀರ್ ತರೀಕೆರೆ

ತಾಜ್ ಮಹಲ್ ನೋಡುವಾಸೆ
ನೋಡಿದ ಮೇಲೆ ಕಟ್ಟುವ ಮನಸಾದರೇ ?
ಎಂಬ ಭಯ

ಮಹಲು ಕಟ್ಟಲು ಷಹಜಹಾನ್
ಆಗಬೇಕಿಲ್ಲ
ಚಕ್ರವರ್ತಿ, ಬಾದಷಹ್ ಪಟ್ಟ , ಅಧಿಕಾರ ಯಾವುದು ಬೇಡ
‘ ಪ್ರೀತಿ ತುಂಬಿರಬೇಕು ಎದೆ ತುಂಬ’

ಮಮ್ತಾಜ್ ಸತ್ತಿದ್ದಕ್ಕೆ ಅಲ್ಲವೇ
‘ ಗೋರಿ ಮೇಲೆ ಮಹಲ್ ನಿಂತದ್ದು’
ಪಾಪ ಮಮ್ತಾಜ್ ನೋಡದ
ಮಹಲ್ ಜಗತ್ತು ನೋಡುತ್ತಿದೆ

ಜಗತ್ತಿಗೆ ಮತ್ತೊಂದು ಅದ್ಭುತ
ಕೊಡುವಾಸೆ ನನಗೆ
ಹಾಗಂತ ಗೆಳತಿ ನಾನು
‘ನಿನ್ನ ಗೋರಿ ಹೇಗೆ ತೋಡಲಿ’ ?

ಮಹಲು ಶಾಶ್ವತವಲ್ಲ
ನೀನು/ನಾನು ಶಾಶ್ವತವಲ್ಲ
ಹೆಸರು ಅಲ್ಲವೇ ಅಲ್ಲ
ಮತ್ತೇ???

 ಪ್ರೀತಿ

ಅದು ಯುಗದ ಮತ್ತು ಜಗದ
ಬಳುವಳಿ
ಅದನ್ನೆ ನಾವು ಮುಂದಕ್ಕೆ ದಾಟಿಸೋಣ


2 thoughts on “ಟಿ.ದಾದಾಪೀರ್ ತರೀಕೆರೆ ಕವಿತೆ -ಮಹಲ್‌ಗು ಮೀರಿದ್ದು

Leave a Reply

Back To Top