ನನಗೂ ಇರಬೇಕಾಗಿತ್ತು ರೆಕ್ಕೆ-ಇಮಾಮ್ ಮದ್ಗಾರ್

ಕಾವ್ಯ ಸಂಗಾತಿ

ನನಗೂ ಇರಬೇಕಾಗಿತ್ತು ರೆಕ್ಕೆಇಮಾಮ್ ಮದ್ಗಾರ್

ನನಗೂ ಇರಬೇಕಾಗಿತ್ತು ರೆಕ್ಕೆ
ಆಗಸದಂಚು ಮುಟ್ಟಿ ಚಂದ್ರನ ಕಾಡಿಬೇಡಿ
ನಕ್ಷತ್ರಗಳ ಕಡತಂದು ಕೊಡುತ್ತಿದ್ದೆ ಅಂಗಳದಲ್ಲಿ
ನೀನಿಕ್ಕುವ ರಂಗವಲ್ಲಿಯ ಚುಕ್ಕಿಗಳಿಗಾಗಿ

ನನಗೂ ಇರಬೇಕಾಗಿತ್ತು ರೆಕ್ಕೆ ಆಕಾಶದಾಚೆ ಹಾರಿಹೋಗಿ
ನವಗ್ರಹಗಳ ಜೊತೆ ರಾಜಿಯಾಗಿ ತಂದುಕೊಡುತ್ತಿದ್ದೆ ನವಗ್ರಹ ಪುಷ್ಪಗಳ ಅಂಗಳದಲ್ಲಿ ನೀನಿಕ್ಕುವ ರಂಗವಲ್ಲಿಯ ಅಲಂಕಾರಕ್ಕಾಗಿ

ನನಗೂ ಇರಬೇಕಾಗಿತ್ತು ರೆಕ್ಕೆ
ದೂರದೂರಿನ ಸಾಗರಗಳ ದಡವಮುಟ್ಟಿ
ತೇಲಿಬರುವ ಪ್ರೇಮದಲೆಗಳಲಿ ಮಿಂದೆದ್ದು
ಪ್ರೇಮದ ಅಲೆಅಲೆಗಳನೇ ಗಂಟುಕಟ್ಟಿ
ತಂದು ಕೊಡುತ್ತಿದ್ದೆ ಪ್ರೇಮಾಂಕುರವಾಗಿ ಪ್ರೇಮವೇ ರಂಗವಲ್ಲಿಯಾಗಲಿ
ಎಂಬ ಪ್ರೀತಿಗಾಗಿ

ನನಗೂ ಇರಬೇಕಾಗಿತ್ತು ರೆಕ್ಕೆ
ನಾಕನರಕಗಳನ್ನೆಲ್ಲಾ ಜಾಲಾಡಿ
ಹಾಡಾಡಿ ಹಾರಾಡಿ ಅಲ್ಲಿರುವ ಎಲ್ಲ ದೇವರಜೊತೆ ಜಗಳಾಡಿ ತಂದುಕೊಡುತ್ತಿದ್ದೆ
ಅಮರತ್ವದ ದಿವ್ಯೌಷಧ ಅಂಗಳದಲ್ಲಿ ನೀನಿಕ್ಕುವ ರಂಗವಲ್ಲಿ ಎಂದೂ ಮಾಸದಿರಲಿ ಎಂಬಾಸೆಗಾಗಿ

ಆದರೇನು ಮಾಡಲಿ ನನಗೂ ಇರಬೇಕಾಗಿತ್ತು ರೆಕ್ಕೆ


3 thoughts on “ನನಗೂ ಇರಬೇಕಾಗಿತ್ತು ರೆಕ್ಕೆ-ಇಮಾಮ್ ಮದ್ಗಾರ್

  1. ಕವಿಯ ಕಲ್ಪನೆ ಚೆನ್ನಾಗಿದೆ. ಆದರೇ, ಏಲ್ಲಾ ಜಾಗತಿಕ ಜನ ಸಮೂಹ ಬಯಸಿದ ಹಾಗೆ ರೆಕ್ಕೆಗಳಿದ್ದರೇ ಒಬ್ಬರಿಗೊಬ್ಬರು ಸಿಗುತ್ತಿರಲಿಲ್ಲ. ಆದರೂ ಕವಿಯು ಚೆನ್ನಾಗಿ ರಚಿಸಿದ್ದಾರೆ. ಅಭಿನಂದನೆಗಳು.

  2. ತಮ್ಮ ಅನಿಸಿಕೆ ಸರಿಯಾಗಿದೆ ಧನ್ಯವಾದಗಳು ಬಿ.ಟಿ.ನಾಯಕ್

Leave a Reply

Back To Top