ಶ್ರೀಕಾಂತಯ್ಯ ಮಠ-ನ್ಯಾಯ ಪಂಚಾಯಿತಿ

ಕಾವ್ಯ ಸಂಗಾತಿ

ನ್ಯಾಯ ಪಂಚಾಯಿತಿ

ಶ್ರೀಕಾಂತಯ್ಯ ಮಠ

ಕುರುಡು ಮತೀಯ ಕಟ್ಟೆ ಮೇಲೆ ನ್ಯಾಯ ಪಂಚಾಯಿತಿ ಯಾಕೆ..!
ಕಿವುಡು ಮಾತಿನ ಚರ್ಚೆಯೊಳಗೆ ಕುದುರುವುದೆ ನೀತಿ ರೀತಿ ಸಂಧಾನವೇಕೆ..!

ಹಳೆಯದಲ್ಲ ಹೊಸದಲ್ಲ ನಟ್ಟ ನಡುವೆ ಕೆಂಪು ದೀಪದಂತೆ ಎಚ್ಚರಿಕೆ ಕೊಟ್ಟರೂ
ಬದಲಾಗದ ಮನಸ್ಸಿನ ಭಾವಕ್ಕೆ ಭಾವನೆಯಿಂದ ಅಂಧಾಭಿಮಾನವೇಕೆ..?

ನೀರೊಳಗೆ ಬೆಂಕಿ ಹತ್ತುವುದೆ
ಗಾಳಿಯಲ್ಲಿ ಸುದ್ದಿ ನಂಬುವುದೆ ಪಾಠಗಳ ಅರ್ಥ ಬೇಕಿಲ್ಲದವರ ಮುಂದೆ
ಹರಡುವ ಸೋಂಕುಗಳ ಚಿಕಿತ್ಸೆ ಕಟ್ಟೆಯಲ್ಲಿ ಬಗೆಹರಿಯುವುದೆ..?
ನಿಯಮ ಮೀರಿದವರ ಗುಣ ಸದ್ಗುಣವೆಂದು ತಿಳಿಯುವುದೆ..?

ನಿಲ್ಲದ ನೀರಾಟವಿದು ಬೆವರಿಳಿಸಿ ಬದುಕುವುದು
ರಕ್ತ ತಿಲಕ ಮಾಡಿಕೊಳ್ಳುವರ ನಡಿಗೆಯನ್ನ ಮೆಚ್ಚುವವರು ಹುಡುಕಿ
ಕಣ್ಣೆದುರಿಗೆ ಕಾಂಚಾಣ ಮೆರೆದು ಚಂಚಲ ಮನಸ್ಸಿಗೆ ಬೆಳಕು ಹಚ್ಚಿದರೆ ಹಣವು ಗುಣ ಬದಲಾಯಿಸುವುದೆ..?

ಬದುಕು ಬಡಿವಾರವಾದರೂ ಭಿನ್ನಾಣದ ಮೆರವಣಿಗೆ ಕಾಣುತ್ತಿದೆ ಕಣ್ಣ ದೃಷ್ಠಿಯಲ್ಲಿ ಅಸಹ್ಯವೆನಿಸುತ್ತಿದೆ.
ಇಂಥ ನೀಚರ ಕೈಬೆರಳು ಗುರುತು ತರುವುದೆ..!
ಒಂದು ಮಾಹಿತಿಯಿಲ್ಲದ ವಚನ ಕಟ್ಟೆ ದಿನಕ್ಕೊಂದು ಪಾಲಿಸಿ ಶೋಭೆ ತರುವುದೆ..?
——————–

Leave a Reply

Back To Top