ಕಾವ್ಯ ಸಂಗಾತಿ
ತಿರುವಿರದ ದಾರಿ
ಅಕ್ಷತಾ ಜಗದೀಶ
ತಿರುವಿರುವ ದಾರಿಯಲಿ
ಸಾಗುವಾಗ ಬಹುದೂರ
ಕ್ಷಣಕ್ಕೊಂದು ಹೊಸತನ
ಮತ್ತೊಮ್ಮೆ ಕೂತೂಹಲ….
ಕಾಣದಾಗಿದೆ ಕೇವಲ
ಹೂಗಳ ರಾಶಿ….
ಸಮ್ಮಿಳನವಾಗಿದೆ
ಕಲ್ಲು ಮುಳ್ಳಿನ ಹಾದಿ…
ಅಲ್ಲೋಮ್ಮೆ ತಂಗಾಳಿ
ತಂಪೆರಗಿದಂತಿದೆ..
ಕೆನ್ನೆ ಕೆಂಪಾಗಿಸಿದೆ
ಉರಿವ ಸೂರ್ಯನ
ಬಿಸಿಲ ಧಗೆ….
ನಿಸರ್ಗದ ಮಡಿಲಲ್ಲಿ
ಕೇಳಿದೆ ಪ್ರಣಯ ಗೀತೆ..
ಹರಿವ ನದಿಯೊಂದು
ಸಾಗರವ ಚುಂಬಿಸಿದೆ
ಸಾರ್ಥಕ ಭಾವದಲಿ…
ಕವಲೊಡೆದ ದಾರಿಯದು
ಅಡಗಿಸಿದೆ ಹರೆಯದ
ಸೊಕ್ಕು…
ಮುಪ್ಪಿನೆದುರು ನಿಂತ
ಬದುಕು
ನೆನಪಿಸುತಿದೆ ಮತ್ತೆ
ಹೂವಿನ ತೇರಿನಲಿ
ತಿರುವಿರದ ದಾರಿಯಲಿ
ಸಾಗುತಿರುವ
ಬಹುದೂರದ ನೆನಪು…