ಸವಿತಾ ಮುದ್ಗಲ್-ಪುಟ್ಟ ಹೂದೋಟ

ಲೇಖನ

ಸವಿತಾ ಮುದ್ಗಲ್-ಪುಟ್ಟ ಹೂದೋಟ

ಪುಟ್ಟ ಹೂದೋಟ ಮನೆ ಮುಂದೆ ಇರಲಿ ಇಲ್ಲದಿದ್ದರೆ ಟೆರಸ್ ಗಾರ್ಡನ್ ಮಾಡಬಹುದು !

ಪುಟ್ಟ ಹೋದೋಟ ಮನೆ ಮುಂದೆ ಇದ್ದರೆ ಮನೆಯು ತುಂಬಾ ಲಕ್ಷಣವಾಗಿ ಕಾಣುತ್ತೆ. ಮನೆ ಮುಂದೆ ಹಸಿರಿದ್ದರೆ ನೋಡಲು ಕೂಡ ತುಂಬಾ ಸುಂದರವಾಗಿ ಕಾಣುತ್ತೆ. ಮನಸ್ಸಿಗೆ ಬೇಸರವಾದಾಗ ಆ ಗಿಡಗಳ ಮಧ್ಯೆ ಒಂದು ಸುತ್ತು ಹಾಕಿ ಬಂದರೆ ಅದೇನು ನೆಮ್ಮದಿ ಸಿಗುತ್ತೆ.

ಎಲ್ಲರೂ ಹೇಳುವರು ಹೂ ತೋಟ ಮಾಡೋದು ಜಾಗ ಎಲ್ಲಿ ಅಂತ ಎಲ್ಲರೂ ಹೇಳುವುದು ಇದೇ ಮಾತು.

ಇತ್ತೀಚಿಗೆ ಎಲ್ಲ ಮನೆಗಳಿಗೆ ತುಂಬಾ ವರಂಡ ಇರುತ್ತೆ ಆದರೆ ನೆಲ ಮಾತ್ರ ಇರುವುದಿಲ್ಲ ಸಸಿಗಳನ್ನು ನೆಡಲು.

ಗಿಡಗಳನ್ನು ಬೆಳೆಯುವುದು ಸುಲಭದ ಮಾತಲ್ಲ ಇದಕ್ಕೂ ಆಸಕ್ತಿ ಇರಬೇಕು.

ತೋಟದ ನಿರ್ವಹಿಸುತ್ತಿರುವ ನಾವು ಇವುಗಳಿಗಾಗಿ ಸ್ವಲ್ಪ ಸಮಯ ಮೀಸಲಿಡರಬೇಕು.

ದಿನಗಳಿಗೆ ಆರೈಕೆ ಮಾಡಲು ಒಂದು ದಿನದಲ್ಲಿ ಒಂದು ತಾಸು ಮಾತ್ರ ಸೀಮಿತವಾಗಿದ್ದರೆ ನಾವು ಚೆನ್ನಾಗಿ ಬೆಳೆಸಬಹುದು

ಕೆಲವರು ಸಸ್ಯ ಪ್ರೀತಿ ಹೊಂದಿದವರು ಪಾಟುಗಳಲ್ಲಿ, ಹಳೆ ಡಬ್ಬಿ ಗಳಲ್ಲಿ, ಪ್ಲಾಸ್ಟಿಕ್ ಚೀಲಗಳಲ್ಲಿ, ರಟ್ಟಿನ ನ ಡಬ್ಬದಲ್ಲಿ ಹಾಗೂ ಮುರಿದಬ್ಬಿಗಳಲ್ಲಿಯೂ ಸಹ ಹೂ ಗಿಡಗಳನ್ನು ಬೆಳೆಸುತ್ತಾರೆ.

ಟೆರೇಸ್ ಗಾರ್ಡನ್ಮಾಡುವುದು ಹೇಗೆ??*

ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಟೆರೆಸ್ ಗಾರ್ಡನ್ ಅತ್ಯಂತ ಪ್ರಮುಖವಾದ ಆಯ್ಕೆಯಾಗಿದೆ.

ಜಾಗದ ಅಭಾವ ಇರುವುದರಿಂದ ಟೆರೆಸ್ ಗಾರ್ಡನ್ ಮಾಡುವುದು. ಉತ್ತಮ.

ಗಿಡಗಳನ್ನು ಬೆಳೆಸಲು ಸರಿಯಾದ ಮಣ್ಣಿನ ಆಯ್ಕೆ ಮಾಡಿಕೊಳ್ಳಬೇಕು.

ಸಾವಯವ ಗೊಬ್ಬರವನ್ನು ಬಳಕೆ ಮಾಡಿದರೆ ಗಿಡಗಳು ಸರಿಯಾಗಿ ಬೆಳೆಯುತ್ತವೆ.

ಗಿಡಗಳನ್ನು ಆಯ್ಕೆ ಮಾಡುವಾಗ ಕೂಡ ನಾವು ಸರಿಯಾದ ಸಸಿಯನ್ನು ಆಯ್ಕೆ ಮಾಡಬೇಕು ಅದೇ ರೀತಿಯಾಗಿಡೆಯಬೇಕು ತಂದ ದಿನವೇ ಆಸೆಯನ್ನು ನೆಡಬಾರದು. ಮರುದಿನ ಅದನ್ನು ನೀಡಬೇಕು ಏಕೆಂದರೆ ಅದು ನಮ್ಮ ಮನೆಯ ವಾತಾವರಣಕ್ಕೆ ತಕ್ಕಂತೆ ಅದು ಹೊಂದಿಕೊಳ್ಳಬೇಕು.

ಗಿಡಗಳಿಗೆ ಕೀಟಬಾಧೆ ಬಾರದಿರಲು ಅವುಗಳನ್ನು ಒಂದು ಪಾಟ್ ಇಂದ ಮತ್ತೊಂದು ಪಾರ್ಟಿಗೆ 3 ಅಡಿ ದೂರದಲ್ಲಿಡಬೇಕು.

ಮನೆಗೆ ಬೇಕಾದ ತರಕಾರಿಗಳನ್ನು ಬೆಳೆಯಬಹುದು ನಾವು ಟೆರೇಸ್ ಗಾರ್ಡನ್ನಲ್ಲಿ.

ಒಂದೇ ಒಂದು ಬದನೆಕಾಯಿ ಗಿಡವನ್ನು ನೆಟ್ಟರೆ ಅದು ಒಂದು ಕುಟುಂಬಕ್ಕೆ ಸಾಕಾಗುವಷ್ಟು ಬದನೆಕಾಯಿಗಳನ್ನು ನೀಡುತ್ತದೆ.

ಒಂದು ಹೀರೆಕಾಯಿ, ಸೌತೆ ಬಳ್ಳಿಯನ್ನು ನೆಟ್ಟರೆ ಅದು ಹಬ್ಬಿ ನಮಗೆ ಬೇಕಾಗುವಷ್ಟು ತರಕಾರಿಗಳನ್ನು ಕೊಡುತ್ತದೆ.

ವಾರಕ್ಕೆ ಬೇಕಾಗುವಷ್ಟು ಸೊಪ್ಪಿನ ಪದಾರ್ಥಗಳನ್ನು ಮನೆಯಲ್ಲೇ ಬೆಳೆಯಬಹುದು. ಕೋತಂಬರಿ ಪುದಿನ ಮೇಂತೆ ಇವು ನಮಗೆ ದಿನನಿತ್ಯಕ್ಕೆ ಬೇಕೇ ಬೇಕು ಆರೋಗ್ಯಕ್ಕೂ ಕೂಡ ಉತ್ತಮವಲ್ಲವೇ?.

ಅಡುಗೆ ಮನೆಯಲ್ಲಿ ಬಳಕೆ ಮಾಡಿ ಎಸೆಯುವ ಬದಲು ತೋಟಕ್ಕೆ ಬಳಸಿ
ಹೇಗೆ ಎನ್ನುವದನ್ನು ಕೆಳಗೆ ಹೇಳಿದೆ.

ಗಿಡಗಳಿಗೆ ನಾವು ಮನೆಯಲ್ಲಿ ಅಡಿಗೆ ಮಾಡಲು ಬಳಸಿದ ನೀರನ್ನು ಅಂದರೆ ಅಕ್ಕಿ ತೊಳೆದ ನೀರನ್ನು ಇವುಗಳಿಗೆ ಹಾಕುತ್ತಾ ಬಂದರೆ ತುಂಬಾ ಹೂಗಳು ಮತ್ತು ಫಲಗಳನ್ನು ನೀಡುತ್ತವೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ರೌದಿ ಗಿಡಗಳಿಗೆ ಹಾಕುತ್ತಾ ಬಂದರೆ ಎಲೆಗಳು ಕೆಡದೆ ತುಂಬಾ ಚೆನ್ನಾಗಿ ಬೆಳೆಯುತ್ತವೆ.

ಒಂದು ಪಾಟ್ ನಲ್ಲಿ ಒಂದು ಸಣ್ಣ ಕರಿಬೇವು ಸಸಿಯನ್ನು ನಾಟಿಸಿದರೆ ನಮಗೆ ದಿನಕ್ಕೆ ಒಗ್ಗರಣೆಗೆ ಹಾಕಲು ಸಹಾಯವಾಗುತ್ತದೆ.

ಜಾಗದ ಅಭಾವದಿಂದ ಸಮೀಪದಲ್ಲಿಟ್ಟರೆ ಒಂದು ಸಸ್ಯಕ್ಕೆ ರೋಗ ಭಾದೆ ಬಂದರೆ ಅದು ಎಲ್ಲ ಗಿಡಗಳನ್ನು ಸಂಪೂರ್ಣ ನಾಶ ಮಾಡುತ್ತೆ ಹಾಗೂ ತನ್ನ ಸುತ್ತಮುತ್ತಲಿನ ಸಸ್ಯಗಳನ್ನು ರೋಗದಿಂದ ನಾಶ ಮಾಡುತ್ತೆ.

ಅಡುಗೆ ಮನೆಯಲ್ಲಿ ಬಳಸಿದ ತ್ಯಾಜ್ಯಗಳನ್ನು ಅವುಗಳನ್ನು ಎಸೆಯದೆ ಒಂದು ಖಾಲಿ ಡಬ್ಬದಲ್ಲಿ ಮುಚ್ಚಿ ದಿನಾಲು ಸ್ವಲ್ಪ ನೀರನ್ನು ಹಾಕುತ್ತಾ ಸ್ವಲ್ಪ ಮಣ್ಣನ್ನು ಬೆರೆಸಿಟ್ಟರೆ ಅದೇ ಗೊಬ್ಬರವಾಗಿ ಮಾರ್ಪಡುತ್ತದೆ.

ನಿಮಗೆ ಮನೆಯ ಹತ್ತಿರ ಯಾವುದಾದರೂ ದನಗಳು ಇದ್ದರೆ ಅದರಿಂದ ಸಿಗುವ ಸಗಣೆಯಿಂದ ಗೊಬ್ಬರವು ಅತಿ ಉತ್ತಮವಾಗಿದೆ.

ಮನೆಯಲ್ಲಿ ಗಿಡಗಳನ್ನು ಬೆಳೆಯುವುದರಿಂದ ನಮಗೆ ಖುಷಿಯ ಜೊತೆಗೆ ಪೂಜೆಗೆ ಬೇಕಾಗುವ ಹೂಗಳನ್ನು ಸಹ ಪಡೆಯಬಹುದು.

ಹಬ್ಬ ಹರಿದಿನಗಳಲ್ಲಿ ಸಡನ್ನಾಗಿ ಮಾರ್ಕೆಟಿಗೆ ಹೋಗಿ ತರಲು ಆಗುವುದಿಲ್ಲ ಒಮ್ಮೊಮ್ಮೆ ಜಾಸ್ತಿ ರೇಟ್ನಿಂದ ಅವುಗಳನ್ನು ನಿರಾಕರಿಸುತ್ತೇವೆ. ಇದರಿಂದ ನಾವು ಮನೆಯಲ್ಲಿ ಹೂಗಳನ್ನು ಬೆಳೆಸುವುದರಿಂದ ನಮಗೆ ಅಂದದ ಜೊತೆಗೆ ನಮಗೆ ಪೂರಕವಾಗಿ ಹೂಗಳ ದಿನವಿಡೀ ಲಭ್ಯವಾಗುತ್ತದೆ.

ವರ್ಷದ 12 ತಿಂಗಳು ಹೂವುಗಳು ನಮಗೆ ಬೇಕೆಂದರೆ ಅದರಲ್ಲಿ ಒಂದು ನಿತ್ಯ ಮಲ್ಲಿಗೆ. ಇದನ್ನು ಬಯಸುವುದು ಅತಿ ಸುಲಭ ಒಂದು ಸಸ್ಯ ನಾಟಿಸಿದರೆ ಅದು ತನ್ನಿಂದ ತಾನೇ ಸಸಿಗಳನ್ನು ತನ್ನ ಸುತ್ತಲೂ ಹರಡುತ್ತದೆ.

ಇವಳನ್ನು ತೆಗೆದುಕೊಂಡು ನಾವು ಸಾಲಾಗಿ ನಾಟಿಸಿದರೆ ತುಂಬಾ ಹೂಗಳನ್ನು ಪಡೆಯಬಹುದು.

ಇವುಗಳಲ್ಲಿಯೂ ಬಿಳಿ,ಗುಲಾಬಿ, ದಟ್ಟ ಗುಲಾಬಿ ವರ್ಣದ ಹೂಗಳು ಲಭ್ಯವಿದೆ.

ಅದೇ ರೀತಿಯಲ್ಲಿ ಅತಿ ಹೆಚ್ಚು ಹೂಗಳ ಬಿಡುವ ಇನ್ನೊಂದು ಸಸ್ಯವೆಂದರೆ ಸ್ಪಟಿಕದ ಹೂ

ಇದು ಕೂಡ ಹಾಗೆ ಬೀಜದಿಂದ ಸಸಿ ಆಗುತ್ತೆ ಒಂದು ಸಸ್ಯವನ್ನು ಬೆಳೆಸಿದರೆ ತುಂಬಾ ಬೀಜ ಉದುರಿ ಸಸಿಗಳು ಆಗುತ್ತವೆ.

ಮನೆಯಲ್ಲಿ ಅತಿ ಸುಲಭವಾಗಿ ಬೆಳೆಯಲು ಕನಕಾಂಬರ,ಮಲ್ಲಿಗೆ, ದುಂಡು ಮಲ್ಲಿಗೆ,ಮಜಾಜಿ,ಸ್ಪಟಿಕ ಸೇವಂತಿ,ದಾಸವಾಳ, ಚಂಡು ಹೀಗೆ ಹಲವಾರು ಗಿಡಗಳನ್ನು ಮನೆಯಲ್ಲಿ ಬೆಳೆಸಿ ನಮಗೆ ಬೇಕಾದ ಹೂಗಳನ್ನು ಪಡೆಯಬಹುದು.

ಹೂ ತೋಟಕ್ಕೆ ಬೇಕಾಗುವ ಸಲಕರಣೆಗಳು

ಎಲ್ಲಕ್ಕಿಂತ ಮುಖ್ಯವಾಗಿ ಹೂದೋಟ ಮಾಡಲು ಕೆಲವು ಸಲಕರಣೆಗಳು ಬೇಕಾಗುತ್ತವೆ. ಅವುಗಳು ನಿಮ್ಮ ಸಮೀಪದ ಮಾರುಕಟ್ಟೆ ಅಥವಾ ಆನ್ಲೈನ್ ಇಂದ ತರಿಸಿಕೊಳ್ಳಬಹುದು.

ಸಲಿಕೆ, ಗುದ್ದಲಿ, ನೀರಾಯಿಸಲು ಪೈಪು,ಗ್ರೋಯಿಂಗ್ ಬ್ಯಾಗ್, ಇನ್ನಿತರ ಸಲಕರಣೆಗಳು ಬೇಕಾಗುತ್ತದೆ.

*ಟೆರೆಸ್ ಗಾರ್ಡನಿಗೆ ಜಾಗದ ಅಳತೆಯನ್ನು ಮಾಡಿಟ್ಟುಕೊಳ್ಳಬೇಕು ಸರಿಯಾದ ಮಾಪನ ಮಾಡಿ ಪಾಟ್ಗಳನ್ನು ಹೊಂದಿಸಿ ಸಸ್ಯಗಳನ್ನು ನಾಟಿಸಿದರೆ ಸೂಕ್ತವಾಗಿ ಬೆಳೆಯಬಹುದು.

ಮನೆ ಮುಂದೆ ಒಂದು ತುಳಸಿ ಹೇಗೆ ಬೇಕೋ ಅದೇ ರೀತಿ ಮನೆಗೊಂದು ಪುಟ್ಟ ಹೂದೋಟವಿದ್ದರೆ ಮನೆಗೂ ಚಂದ ನಮಗೂ ಆನಂದ.


ಸವಿತಾ ಮುದ್ಗಲ್

One thought on “ಸವಿತಾ ಮುದ್ಗಲ್-ಪುಟ್ಟ ಹೂದೋಟ

  1. ಧನ್ಯವಾದಗಳು ಮಧುಸೂದನ್ ಸರ್ ಗೆ, ನಮ್ಮ ಲೇಖನ ಪ್ರಕಟಿಸಿದ್ದಕ್ಕೆ, ನಿಮ್ಮ ಪ್ರೋತ್ಸಾಹ ಇರಲಿ

Leave a Reply

Back To Top