ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಜೀವನದ ಕುಶಲತೆಗ ಒರೆಹಚ್ಚಿ ಬರೆಸುವುದು ಪರೀಕ್ಷೆ.
ಪಾವನ ರಕ್ಷೆಯ ನಿರೀಕ್ಷಿತ ಛಲವು ಕರೆಸುವುದು ಪರೀಕ್ಷೆ.
ಪ್ರತಿ ಮನೆಯ ಬೆಳಗು ಬರುವ ಕಷ್ಟಕೋಟಲೆಗಳೆಷ್ಟೊ.
ಶೃತಿ ಸೇರದೆ ಹೋದರೆ ಬಾಳೆ ತೊರೆಸುವುದು ಪರೀಕ್ಷೆ.
ಬೆವರಿನ ಹನಿಗಳ ಬೆಲೆ ತಿಳಿಯದೆ ಭಾರವೆನಿಸಿ ಬರುವ ತರಲೆಗಳು
ತವರಿನ ಮನೆಯ ನೆನಪು ಉಮ್ಮಳಿಸಿ ಧಾರೆಯಾಗಿ ಒರೆಸುವುದು ಪರೀಕ್ಷೆ
ಮಾಗಿಯ ಚಳಿಯಲ್ಲಿ ಮಿಂಚಾಗಿ ಸುಳಿದು ನೋವು ತಂದಿದೆ ನೋಡು
ಬಾಗಿಲ ಬಳಿಯಲಿ ಸಂಚಾಗಿ ನಿಂದು ಅಳೆದು ತೆರೆಸುವುದೆ ಪರೀಕ್ಷೆ .
ಬಂದದ್ದೆಲ್ಲವು ಆ ದೇವನ ಇಚ್ಛೆ ಎನುತ ಜಯಾ ಮೌನವಾಗಿಹಳು
ಅಂದದ್ದೆಲ್ಲ ಒಳ್ಳೆಯದಕೆ ಅರಿತು ಹೆದರದೆ ಮೆರೆಸುವುದು ಪರೀಕ್ಷೆ..