ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುರೇಶ ತಂಗೋಡ

ಬದುಕು

ಒಮ್ಮೆ ಏರುತಾ
ಮೊಗದೊಮ್ಮೆ ಬೀಳುತಾ
ನಡೆದಿದೆ ಹಿಂದಕೆ-ಮುಂದಕೆ
ಈ ಬದುಕು.

ಕಷ್ಟಗಳ ಕಟ್ಟಿ
ಸುಖವ ಬಿಚ್ಚಿಡುತಾ
ಬಾಳಬೇಕಿದೆ ಮೂರು ದಿವಸ
ಈ ಬದುಕ.

ಹೆಂಗೆಂಗೋ
ಎಲ್ಲೆಲ್ಲೋ ದಿನ ಕಳಿತಾ
ಅರ್ಥವಿಲ್ಲದ್ದು ಬದುಕಲ್ಲ,ಅರಿಯಬೇಕಿದೆ ನೀ
ಈ ಬದುಕ.

ಮೂರು ದಿನವೊ
ನೂರು ದಿನವೊ ಗೊತ್ತಿಲ್ಲ
ಇಲ್ಲಿ ನಿನ್ನದೇನಿಲ್ಲ ಮುದುಕ ತಿಳಿ
ಈ ಬದುಕ.

ಬದುಕ ಬಾಳಬೇಕು
ಹಸನಾಗಿಸಬೇಕು ನೋಡ
ಪ್ರತಿಕ್ಷಣ ಜೀವಿಸು ಆಗ ಸಾರ್ಥಕ
ಈ ಬದುಕ.


About The Author

Leave a Reply

You cannot copy content of this page

Scroll to Top