ಅನುವಾದಿತ ಕವಿತೆ-ಅಂತಿಮ ಅವಕಾಶ

ಅನುವಾದ ಸಂಗಾತಿ

ಅಂತಿಮ ಅವಕಾಶ

ಮೂಲ ಆಂಗ್ಲ:ಎರ್ನ ಹ್ಯಾನ್ಸನ್
ಅನವಾದ:ಬಾಗೇಪಲ್ಲಿ ಕೃಷ್ಣಮೂರ್ತಿ

ಅಂತ್ಯ ಕಾಲದಿ ಜವರಾಯ ಬಂದಾಗ
ನಾವು ಕೈ ಕುಲಕುತ ವಿದಾಯ ಹೇಳುವ ಸಮಯ
ಮೇಲೇರಿ ಹೋಗವಾಗ ನೀನೊಮ್ಮೆ ಬಾಗಿ ನನ್ನ ನೋಡುವೆ

ನಾವು ನಮ್ಮ ಅಗತ್ಯಗಳನೆಲ್ಲಾ ಮಣಿಸಿ ಸಹಕಾರದಿ ಪೂರೈಸಿಕೊಂಡೆವು
ಆದರೆ ಸಮಯವನು ಸದ್ಭಳಕೆ ಮಾಡಲಿಲ್ಲ

ಈಗ ನನಗೆ ಉಳಿದುದಾದರೂ ಏನು? ಮುಂದಿನ ಬದುಕಿಗೆ

ನೀ ಮೇಲಣ ಆಲೋಕದಿಂದ ನನ್ನ ಗುರುತಿಸಬಲ್ಲೆಯಾ?
ನಿನ್ನ ಹೃದವನೇನೋ ನೀನು ಭದ್ರ ಪಡಿಸಿ ಕೊಂಡೈದಿದ್ದರಿಂದ
“ನನ್ನನು ನಾನೇ ಕಳೆದುಕೊಂಡೆ”


Leave a Reply

Back To Top