ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಸುಜಾತಾ ರವೀಶ್

ಮನೆಯಂಗಳದಿ ಚೆಲುವ ವಿಸ್ತಾರವಾಗಿ ಹೊಳೆದಿಹುದು ಈ ರಂಗೋಲಿ
ಮನದಂಗಣದಿ ಒಲವ ಪ್ರಸ್ತಾರವಾಗಿ ಉಳಿದಿಹುದು ಈ ರಂಗೋಲಿ

ಅಂಗನೆಯರ ಸೃಜನತೆಗೆ ನಿದರ್ಶನವಾಗಿ
ನಿಂತಿದೆ ಪುರಾಣ ಕಾಲದಿಂದ
ರಂಗನೊಲಿಸುವ ಪರಿಯೆಂದು ವರ್ಣಿತವಾಗಿ ಬೆಳೆದಿಹುದು ಈ ರಂಗೋಲಿ

ಬಳ್ಳಿ ಎಲೆ ಹೂವುಗಳು ಎಳೆಎಳೆಯಾಗಿ ಮೂಡಿ ನಗುತಿಲ್ಲವೇ
ಬೆಳ್ಳನೆಯ ಬೆಳಗಿನಲಿ ಶ್ವೇತ ಚಿತ್ತಾರವಾಗಿ
ಬೆಳಗಿಹುದು ಈ ರಂಗೋಲಿ

ರಂಗಿನ ಬಗೆಬಗೆ ಪುಡಿಗಳು ಮೈದುಂಬಿ ಕಣ್ಣ ತಣಿಸಿರುವುವು ನೋಡು
ದಂಗುಗೊಳಿಸುತ ಹೂವಿಂದ ಅಲಂಕೃತವಾಗಿ ಸುಳಿದಿಹುದು ಈ ರಂಗೋಲಿ

ಹವ್ಯಾಸವಿದನು ರೂಢಿಸುತ ಬಳಸುತಿಹಳು ಸುಜಿ ಎಳವೆಯಿಂದ
ವಿನ್ಯಾಸಗಳ ರಚನೆಗೆ ಮನವ ಹರ್ಷಿತವಾಗಿ ತೊಳಗಿಸಿಹುದು ಈ ರಂಗೋಲಿ


About The Author

1 thought on “ಸುಜಾತಾ ರವೀಶ್-ಗಜಲ್”

Leave a Reply

You cannot copy content of this page

Scroll to Top