ಗಜಲ್-ಬಾಗೇಪಲ್ಲಿ

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

(ತರ್ಕಶಾಸ್ತ್ರದಲಿ, ಎರಡು ವಿವಿಧ ಸರಿ ಮಂಡಿಸಿದ ವಾದ, ಅವುಗಳಿಂದ ಮೂಡಿದ ನಿಖರ ತೀರ್ಮಾನ, ವಾಕ್ಯಗಳ ಸಮೂಹವನು ” ಸಿಲೋಜಿಸಂ” ಎನ್ನುವರು.
ಉದಾ;

ಮನುಜರೆಲ್ಲಾ ಮರಣಿಸುವರು.

ರಾಮನೊಬ್ಬ ಮನಜನು.

ಆದ್ದರಿಂದ ರಾಮನೂ ಮರಣಿಸುವನು
ಈ ಹಿನ್ನಲೆಯಲಿ ಗಜಲ ಓದಲು ಮನವಿ)

ನಾನು ಹುಚ್ಚನೆಂದವ ಹುಚ್ಚನೇ
ಬೆಪ್ಪನೆಂದವ ನಿಜದಲಿ ಬೆಪ್ನನೇ

ತನ್ನ ತಾ ಅರಿಯದಿರೆ ಮೂರ್ಖ
ತನಗೆ ಹುಚ್ಚೆಂದವ ಖರೆಯಲಿ ಮಳ್ಳನೇ

ಜಗಕೆ ನಾ ಹುಚ್ಚನೆಂದು ಕೂಗಿ ಹೇಳು
ಚತುರರರಿವರು ನೀ ಹೇಳಿದ್ದು ಸುಮ್ಮನೆ

ಪದಗಳ ಅರ್ಥವು ಶಬ್ಧದದಿ ಇಲ್ಲ
ಅನುಭವಿಸಿ,ಪದ ಅರ್ಥೈಸಿಕೋ ತಮ್ಮನೆ

ಕೃಷ್ಣಾ! ಚುರುಕು ಇರಿಸು ಬುದ್ಧಿಯ ಸದಾ
ಆಗದಿರು ವ್ಯಂಗ್ಯ ಅರಿಯದೆ ಬಿಮ್ಮನೆ.


Leave a Reply

Back To Top