ಅನುವಾದ ಕವಿತೆ:

ಅನುವಾದ ಸಂಗಾತಿ

ಪ್ರೇಯಸಿ ಮತ್ತು ಹೂವು….!?’

ಮಲಯಾಳಂ ಮೂಲ: ಸಲೀಂಚೇನಂ.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

ನನ್ನ ಪ್ರೇಯಸಿಗೆ
ಆಟಿಕೆ ವಸ್ತುಗಳಿಗೆ
‘ಬಣ್ಣ’ ಹಾಕುವುದೇ
ಕೆಲಸ….!

ನದಿಗಳಲ್ಲಿ ಬಣ್ಣ
ನೋಡುವ ಎಲೆಗಳಲ್ಲಿ
ಅವಳು ಮುಖ
ನೋಡುತ್ತಾಳೆ…!

ಅಂದು ಅವಳು
ನದಿಯೂ….
ನಾನು ‘ಎಲೆ’ಯೂ
ಆಗಿದ್ದೆ….!

ಆದರೂ ನಾನು
ಅವಳ ದಿಕ್ಕಿನತ್ತ
ಹರಿದೆ..!
ಮತ್ತೆ ಪ್ರಣಯದ
ಹುಚ್ಚಿನಲ್ಲಿ ನದಿ ತೀರಾವನ್ನು
ದಾಟಿ ಉಕ್ಕಿ ಹರಿದೆ…!

ನದಿ ತೀರಾದಲ್ಲಿ
ಅರಳಿದ ಎಲ್ಲಾ
‘ಹೂವು’ಗಳಿಗೂ ಅವಳ
‘ ಹೆಸರು ‘ ನ್ನು ಇಟ್ಟೆ…!

ಈ ವೇಳೆ
ಎಲೆಗಳಲ್ಲಿ ‘ಮೊಟ್ಟೆ’ ಹಾಕಿ
ಮರಿಗಳನ್ನು ಮಾಡಲು
ಬಂದ ‘ಚಿಟ್ಟೆ’ಗಳು ಒಂದು
ಸತ್ಯ ಹೇಳಿತ್ತು…!

‘ಅವಳ ಶರೀರ
ಪೂತಿ೯ ಹೂವುಗಳು
ಮಾತ್ರ ಅರಳಿವೆ..’
ಎಂದು…!!!?.


Leave a Reply

Back To Top