ಕಾವ್ಯ ಸಂಗಾತಿ
ಆತಂಕ
ಪ್ರೊ.ರಾಜನಂದಾ ಘಾರ್ಗಿ
ವಿಗ್ರಹವೆಂದು ದೇವರ ಕದ್ದವ
ಮತ್ತೆ ಬಂದು ಕತ್ತಲು ನೋಡಿ
ತರಗೆಲೆಗಳ ರಾಶಿ ಕದಡಿ
ತನ್ನ ಹೆಜ್ಜೆಗಳ ಗುರುತುಗಳರಸಿ
ಮೂಲೆ ಮೂಲೆಗಳಲ್ಲಿ ಜೋತು ಬಿದ್ದ
ಜೇಡರ ಬಲೆಗಳ ನೋಡುತ್ತ
ಬಾಳು ಬಿದ್ದ ಗೋಡೆಗಳ ನೋಡಿ
ಧೂಳಡಿಯ ಬಣ್ಣಗಳ ಕಲ್ಪನೆ ಮಾಡುತ್ತ
ಕಿವಿಗಳಲ್ಲಿ ತುಂಬಿಕೊಂಡಿದ್ದ
ಗಂಟೆಗಳ ನಿನಾದವ ಅರಸುತ್ತ
ಕಾರಣ ತಿಳಿಯದೆ ಹುಬ್ಬೇರಿಸಿದಂತೆ
ಹೃದಯವೆಂದು ಆತ್ಮವನೇ ಕದ್ದವ
ಸದ್ದಿಲ್ಲದೇ ಮಾಯವಾಗಿದ್ದವ
ಮತ್ತೆ ಮರಳಿ ಬಂದು
ಪಾಳು ಬಿದ್ದ ಮನದಾಳದ ಕತ್ತಲೆಗೆ
ಕಾರಣ ಕೇಳಿದರೆ ?
ಉತ್ತಮ ಕವನ
ಡಾ ಶಶಿಕಾಂತ ಪಟ್ಟಣ
Wah Nanda