ಅನುವಾದ ಕವಿತೆ: ಬದಲಾವಣೆ….!

ಕಾವ್ಯ ಸಂಗಾತಿ

ಬದಲಾವಣೆ….!

ಮಲಯಾಳಂ ಮೂಲ:ರಫೀಕ್ ಬದರಿಯಾ.

ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ

ನಮ್ಮ ಮನಸ್ಸಿಗೆ
ಇಷ್ಟವಾಗಿರುವ ಕೆಲ
ಮನುಷ್ಯರು…
ನಮ್ಮ ಬಾಳಿನಿಂದ ದೂರವಾಗುವಾಗ
ರೂಪ ‘ಬದಲಾವಣೆ’ ವಾಗುವ
ಕೆಲ ಸ್ಥಳಗಳು ಉಂಟು…!

ಅವಳನ್ನು ಕಾಣಲು
ದಾಟಿ ಹೋಗುತ್ತಿದ್ದ
‘ಹೊಳೆ’ಯೂ ಈಗ
ಉಕ್ಕಿ ಹರಿದು
ಭಯಪಡಿಸುತ್ತಿದೆ…!

ಪರಸ್ಪರ ಕೈ ಹಿಡಿದುಕೊಂಡು
ನಡೆಯುತ್ತಿದ್ದ ಆ
ಸಣ್ಣ ‘ ದಾರಿ’ಯೂ
ಈಗ ಹಲವು ಭಾಗಗಳಾಗಿ
ವಿಂಗಡಣೆಯಾಗಿ ನನ್ನನ್ನು
ದಾರಿ ತಪ್ಪಿಸುತ್ತಿದೆ…!

ಅವಳನ್ನು ಕಾಣಲು
ಹಾರಿ ನಗೆಯುತ್ತಿದ್ದ
‘ಗೋಡೆ’ಗಳು ಸಹ
ಈಗ ಆಕಾಶ ಎತ್ತರಕ್ಕೆ
ಬೆಳೆದು ಒಂದು
ಪ್ರಶ್ನೆ ಚಿಹ್ನೆ ರೀತಿ
ನೋಡುತ್ತಿದೆ…!

ಜಗತ್ತಿಗೆ ರೂಪ ಬದಲಾಗಲು
ಒಂದು ನಿಮಿಷ ಸಾಕು…!
ಒಂದು ಮನುಷ್ಯ
ತಿರುಗಿ ನಡೆದಷ್ಟು
ದೂರ ಅಷ್ಟೇ…!!!


ಮಲಯಾಳಂ ಮೂಲ:
ರಫೀಕ್ ಬದರಿಯಾ.

ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ

Leave a Reply

Back To Top