ಶಿಕ್ಷಣದ ಬಗ್ಗೆ-ಸುಮಂಗಲಾ.ಎಸ್.ಹಂಚಿನಾಳ,

ಶಿಕ್ಷಣ ಸಂಗಾತಿ

ಸುಮಂಗಲಾ.ಎಸ್.ಹಂಚಿನಾಳ,

ಶಿಕ್ಷಣ

( ‌೧ ‌) ‌ಒಂದು ದೇಶದ ಅಭಿವೃದ್ಧಿಗೆ ಮೂಲ ಬೇರು ಶಿಕ್ಷಣ.ಹಾಗಾಗಿ ಸರಕಾರ, ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿ, ಖಾಸಗಿ ಶಾಲೆಗಳಲ್ಲಿರುವ ಅನುಕೂಲತೆಗಳಾದ ಗಾಳಿ ಬೆಳಕಿರುವ ಸುಸಜ್ಜಿತ ಕಟ್ಟಡ,ಆಟದ ಮೈದಾನ, ಆಟಿಕೆಗಳು,ಶುದ್ಧ ನೀರು,ಶೌಚಾಲಯ,ಆಸನಗಳವ್ಯವಸ್ಥೆ,ವಾಚನಾಲಯ,ಪ್ರಯೋಗಾಲಯ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಸದಾ ಮಿಡಿಯುವ ಬುದ್ಧಿವಂತ ಗುರುಗಳ ವ್ಯವಸ್ಥೆ ಕಲ್ಪಿಸಬೇಕು.

( ‌೨ ‌) ಶಿಕ್ಷಕ ವೃತ್ತಿಯವರಿಗೆ ಸರಕಾರಿ ಶಾಲೆಗಳಲ್ಲಿಯ ಎಲ್ಲ ಒಳ ಹೊರಗು ಗೊತ್ತಿರುವುದರಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿ‌ಸುತ್ತಾರೆ.ಜೊತೆಗೆ ವ್ಯಾವಹಾರಿಕವಾಗಿ ಆಂಗ್ಲ ಭಾಷೆಯ ಅವಶ್ಯಕತೆ ಇರುವುದೂ ಪ್ರಮುಖ ಕಾರಣ.

( ‌೩ ) ಶಿಕ್ಷಣ ಸಚಿವರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಾಲೆಯಲ್ಲಿ ಅಷ್ಟೇ ‌ಎಕೆ  ಪರದೇಶದಲ್ಲಿ ಓದಿಸುತ್ತಿರುವಾಗ ಬೇರೆಯವರಿಗೆ ಹೇಗೆ ಹೇಳಲು‌ಸಾಧ್ಯ ?

( ‌೪) ‌ಕನ್ನಡ ಉಳಿಸಿ ಬೆಳೆಸಲು ಸರಕಾರ &  ಸಾಹಿತ್ಯ ಪರಿಷತ್ತು ಮಾಡಬೇಕಾದುದು,

(೧) ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಕನ್ನಡದಲ್ಲಿಯೇ ಆಗಬೇಕು.

(೨) ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲಿಯೇ ಆಗಬೇಕು.

(೩) ಸರಕಾರಿ ಕಛೇರಿಗಳಲ್ಲಿ ವ್ಯವಹಾರ ಕನ್ನಡದಲ್ಲಿಯೇ ನಡೆಯಬೇಕು.

(೪) ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ವಿಪುಲವಾಗಿ ದೊರೆಯಬೇಕು.

(೫) ಉದ್ಯೋಗ ನೀಡಲು ಆಂಗ್ಲ ಭಾಷೆ ಮಾನದಂಡವಾಗಬಾರದು.

(೬) ಆಂಗ್ಲ ಭಾಷೆಯಲ್ಲಿ ಮಾತಾಡಿದರೆ ಮಾತ್ರ ಬುದ್ಧಿವಂತರು ಎನ್ನುವ ಭ್ರಮೆ ದೂರವಾಗಬೇಕು.


ಸುಮಂಗಲಾ.ಎಸ್.ಹಂಚಿನಾಳ,

Leave a Reply

Back To Top