ನರಸಿಂಗರಾವ ಹೇಮನೂರ ಕವಿತೆ- ಕಣ್ಣೀಗಿ ನಿದ್ದಿ ಇಲ್ಲ

ಕಾವ್ಯ ಸಂಗಾತಿ

ಕಣ್ಣೀಗಿ ನಿದ್ದಿ ಇಲ್ಲ

ನರಸಿಂಗರಾವ ಹೇಮನೂರ

ಒಂದ್ವಾರದಾಗ ಬರ್ತೀನಿ ಅಂತ
ಹ್ವಾದಾವ ಬಂದೇ ಇಲ್ಲ
ಹಗಲ ರಾತ್ರಿ ಬರಿ ಅವನ ನೆನಪ
ಕಣ್ಣೀಗಿ ನಿದ್ದಿ ಇಲ್ಲ!

ಒಂದೊಂದು ದಿವಸ ಒಂದೊಂದು ವರಸ
ತಲೆ ತುಂಬ ಚಿಂತಿ ನನಗ
ಎಂದು ಬಿಟ್ಟು ಇರಲಾರದವನು
ಯಾಕಿಂಗ ತಡದಾನೀಗ

ಹುಚ್ಚಿ ನೀನು ಬಲು ಚಿಂತಿ ಮಾಡತಿ
ಹೀಂಗಚ್ಚಿ ಕೊಂಡರ್ಹ್ಯಾಂಗ್
ಬಂದಾನೇಳಾ ಇಂದಿಲ್ದ್ ನಾಳೆ
ಅಲ್ಲಿ ಕೆಲಸ ಮುಗಿದ ಮ್ಯಾಗ

ಎಂದಂದು ನಕ್ಕು ಗುದ್ದಿ ಹೇಳತಾರ
ಗೆಳತೇರು ದಿನ್ನಾ ಬಂದು
ಅವರಿಗೇನ ತಿಳಿತೈತಿ ಒಳಗಿನಾ
ಬ್ಯಾನಿ ಎಂಥದ್ದೆಂದು

ಬಿಟ್ಟಿಲ್ಲ ನಾವು ಹಿಂಗೊಂದು ದಿನವು
ಅದಕ್~ ಏನ ಹೀಂಗ
ವರ್ಸಾನುಚಾರ ಇನ್ನಗಲಿ ಇದ್ದವರ
ಪಾಡು ಇರಬೇಕ ಹೆಂಗ್.


One thought on “ನರಸಿಂಗರಾವ ಹೇಮನೂರ ಕವಿತೆ- ಕಣ್ಣೀಗಿ ನಿದ್ದಿ ಇಲ್ಲ

  1. ನಿದ್ದಿ ಇಲ್ಲದ ಸುದ್ದಿ ಗೆಳತೆರಿಗೇನು ಗೊತ್ತು? ಒಳಗಿನ ಬ್ಯಾನಿ ಅವರಿಗ್ಯಾಂಗ ತಿಳಿದಿತ್ತು?
    ವಿರಹ ಗೀತೆ ಚನ್ನಾಗಿದೆ…. ಅಭಿನಂದನೆಗಳು.
    – ರಾಜೇಂದ್ರ ಬಡಿಗೇರ

Leave a Reply

Back To Top