ನಳಿನ ಡಿ ಕವಿತೆ-ಹೊಣೆ

ಕಾವ್ಯ ಸಂಗಾತಿ

ಹೊಣೆ

ನಳಿನ ಡಿ

ಬಾ ಎಂದು ಕರೆದೆ
ಓ ರಸಿಕ, ಓಡೋಡಿ ಬಂದೆ..

ಕಣ್ಮನ ತುಂಬಿದ ನೀಲ ಕುರುಂಜಿ
ಕಿತ್ತೇಕೆ ಹೋಗುವೆ?
ಬಂದು ಹೋಗುವ
ಸಂಭ್ರಮದೆ ನನ್ನೇಕೆ ತುಳಿಯುವೆ?

ನಿನ್ನ ಸಡಗರಕೆ
ಅಡಗದಿರಲಿ
ಹಸಿರ ನೀಲ ಜಾತ್ರೆ

ಸನ್ಮಿತ್ರನಾಗಿ ಸವಿದು
ನಾಜೂಕಾಗಿ ಮುನ್ನಡಿ ಇಡು,
ನನಗೂ ನಿನಗೂ ಸೌಖ್ಯವಿಹುದು..

ನಾ ಕರೆವೆ ಧ್ಯಾನಕೆ,
ನೀ ತರುವೆ ಪ್ಲಾಸ್ಟಿಕ್ ಏತಕೆ?
ಕುಡಿದು ಬಿಸುಟ ಬಾಟಲು
ಅಂದಗೆಡಿಸುತಿದೆ ಗಿರಿ ಮಡಿಲು,

ಇರಲಿ ನನ್ನ ರಕ್ಷಣೆಯ ಹೊಣೆ
ನಿನ್ನ ರಸ ರೋಮಾಂಚನದಲಿ..

ಹನ್ನೆರಡಕೆ ಅರಳಿದರೂ ಸಕಲರಿಗೂ
ಲೇಸು ಬಯಸಿ ಹೊರಡುವೆ,
ನಿತ್ಯ ಶುಭ‌ಕೋರಿ ನೀ ಪ್ರಕೃತಿಯ ಬಾಳಗೊಡಬಾರದೆ?

———————————


ನಳಿನ ಡಿ

One thought on “ನಳಿನ ಡಿ ಕವಿತೆ-ಹೊಣೆ

Leave a Reply

Back To Top