ಇಮಾಮಹುಸೇನ ಮದ್ಗಾರ ಹೀರೆಮನ್ನಾಪೂರ

ಕಾವ್ಯ ಸಂಗಾತಿ

ಮುಳುಗಿಸದಿರು ಬದುಕು

ಇಮಾಮಹುಸೇನ ಮದ್ಗಾರ ಹೀರೆಮನ್ನಾಪೂರ

.

ಅತ್ತು ಸತ್ತು ಹೋದ ಬದುಕು ಕಣ್ತೆರೆಯುತಿದೆ ಕತ್ತಲೆಯಬೆತ್ತಲಲಿ ಮೊದಲ ಕನಸು ಮರೆತು ಮಿನುಗುತಿದೆ ಭರವಸೆಯ ಬೆಳಕಿನಲಿ ನೀಮತ್ತೆ ನೆನಪಿಸಿ ಕಾಡಬೇಡ ನೆನಪೇ..

ಹಳಿತಪ್ಪಿದಾ ರೈಲು ನೀರಿನಾಳಕೆ ಬಿದ್ದು ಕೆನ್ನೆಗಿಳಿದ ಕಣ್ಣಹನಿ ಘನೀಭವಿಸಿ ಕಂಡ ಕನಸನ್ನೇ ನುಂಗಿತ್ತು ಕಣ್ಣು ಮಾಯುತಿದೆ ಈಗೀಗ ಮನಸಿಗಾದ ಹುಣ್ಣು ನೀಮತ್ತೆ ನೆನಪಿಸಿ ಕಾಡಬೇಡ ನೆನಪೇ

ಕಾಮನೆಗಳ ಕದವತಟ್ಟಿ ಭಾವನೆಗಳ ಬೆನ್ನತಟ್ಟಿ ಒಡಲಾಳದಲ್ಲಿ ಒರತೆ ಹುಟ್ಟಿಸಿ ಪುಣ್ಯದೊಡಲ ಬಿಚ್ಚಿ ಪಾಪಬೀಜಬಿತ್ತಿ ಹೊಂಗನಸ ಹೊಸಕಿ ಹಾಕಿ ನೀ ಮತ್ತೆ ನೆನಪಿಸಿ ಕಾಡಬೇಡ ನೆನಪೆ.

ಚಂದ್ರನಿಲ್ಲದೇ ಪಾಳುಬಿದ್ದಿದೆ ಭಾನು‌ನೀಮತ್ತೆ ಕೆದಕಬೇಡ ಆ ಹಾಳು ದುಗ್ಧ ರಾತ್ರಿ ಯನು ಬಾಳಾಗಿತ್ತು ಬೇವು ಚಿಗುರೊಡೆದಿತ್ತು ನೋವು ಹೆಡೆ ಎತ್ತಿತ್ತುಹಾವು ನಾಪಾಪಿ ಬರಲಿಲ್ಲ ಸಾವು !
ನೀಮತ್ತೆ ನೆನಪಿಸಿ ಕಾಡಬೇಡ ನೆನಪೇ

ನಾನು ಸೋತರೆ ತಾನೆ ನಿನ್ನ ಗೆಲುವಿಗೆಬೆಲೆ ?
ನಾನು ಸೋತುಬಿಟ್ಟೆ ! ಹೂತಿಟ್ಟ ಕನಸುಗಳ ಹೆಣತಂದು ಮತ್ತೆ ಕಣ್ಣಂಗಳದಲ್ಲಿ ಹಾಸಿ ನೀಮತ್ತೆ ನೆನಪಿಸಿ ಕಾಡಬೇಡ ನೆನಪೇ …


Leave a Reply

Back To Top