ಕಾವ್ಯ ಸಂಗಾತಿ
ನೆನಪುಗಳು
ಡಾ ಡೋ ನಾ ವೆಂಕಟೇಶ
ನೆನಪುಗಳ ಬುತ್ತಿ
ಕನಸುಗಳ ಜಳಕ
ಭಂಡಾರಕ್ಕೆ ಬೀಗ ಹಾಕಿ ಕೀಲಿಕೈ
ಮರೆತ ಜೀವನಾನುಭವ
ಮೊರೆತಗಳ ಭೋರ್ಗೆರೆವ
ರೌರವ
ಹಗಲಲ್ಲಿ ಕಂಡ
ನಟ್ಟಿರುಳ ಕನಸು
ಬೆಳಗಿನ ಜಾವದ ಕೆಂಡ
ಸಂಪಿಗೆಯ ಸುವಾಸನೆ
ಹಾವು ಹಾಡುತ್ತಾವೆ
ಹಾಗೇ
ಹಗಲು ಕಂದುವ ಹೊತ್ತು
ನರಸಿಂಹ ಕನಸ ಕೂಸನ್ನ
ಮಡಿಲಲ್ಲಿ ಹೊತ್ತು
ಉಗ್ರನಾಗಿದ್ದು, ವ್ಯಗ್ರನಾಗಿದ್ದು
ನಿನ್ನ ನೆನಪಿನ ಹಿರಣ್ಯ ಕಶ್ಯಪನಿಗೆ
ನನಸಿನ ಸಾತ್ವಿಕ ಕಯಾದು
ಉಪಮಾನ ಉಪಮೇಯಗಳ ಬಯಲಾಟ
ಹೋದ ಜನ್ಮದ ಪ್ರಿಯೆ ಹೇಳೆ
ನೀ ಯಾರು
ನರಸಿಂಹಳೇ ಯಾ
ಕಯಾದು ವೇ
ಫಲಿತಾಂಶ ಬಂದಾಗಿದೆ
ಪ್ರಹ್ಲಾದ ಹೇಳಿ ಆಗಿದೆ
Excellent poem
Thank you Prasanna
ನಿಮ್ಮ ನೆನಪಿನ ಬುತ್ತಿಯಲ್ಲಿ ಪ್ರಲ್ಲಾದ ಮಹಾರಾಜರ
ದರ್ಶನ ಪಡೆದು ಈ ದಿನ ಸಾರ್ಥಕವಾಯಿತು.
ಧನ್ಯವಾದಗಳು ಮಂಜಣ್ಣ !
Very nice poem!
Thanks Usha.
ನಿಮ್ಮ ಓದಿನ ಆಸಕ್ತಿಗೆ ಒಂದು ಸಲಾಮ್!!
ತುಂಬ ಚೆನ್ನಾಗಿ ಮೂಡಿ ಬಂದಿದೆ ಫೊ ನಾ ,ಅಭಿನಂದನೆಗಳು..ನಿಮ್ಮ ಕವನಗಳ ಕೃಷಿ ಮುಂಫುವತೆಯಲಿ
ಧನ್ಯವಾದಗಳು ಆಶಾ
ಮತ್ತು ಥ್ಯಾಂಕ್ಸ್!
ಮತ್ತೊಮ್ಮೆ ಚಪ್ಪಾಳೆ. ಸುಂದರ ಕವನ ಕವಿತೆ.
ನಿಮ್ಮ ಚಪ್ಪಾಳೇಗಳ ಮಿಡಿತ ತುಡಿಯುತ್ತಲೇ ಇದೆ ,ಸೂರ್ಯ
ಧನ್ಯವಾದಗಳು!