ಕಾವ್ಯ ಸಂಗಾತಿ
ಬಂಗಾರದ ಮೀನು
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಗಾಜಿನ ಜರಡಿಯಲ್ಲಿ ಬೆರಳು ಅದ್ದಿದಾಗೊಮ್ಮೆ ಅಕ್ವೇರಿಯಂನ ಆ ಜೋಡಿ ಮೀನುಗಳ
ಹೃದಯ ಬಡಿತ ಜೋರಾಗುತ್ತದೆ
ಅದೇ ಮೇಲಿಂದ ಯಾವುದೋ ಲೋಕದ
ಕಾಣದ ಕೈಗಳು ನಮ್ಮನ್ನು ಬೇರ್ಪಡಿಸಬಹುದೆಂಬ ಆತಂಕ ಅವುಗಳಿಗೆ
ನನಗಾದರೂ ಆ ಬಂಗಾರದ ಮೀನುಗಳನ್ನು ಒಮ್ಮೆಯಾದರೂ ಮುಟ್ಟಿ ಖುಷಿಪಡುವ ತವಕ
ಮಗನ ಕಾಲು ಸದ್ದು ಕೇಳಿದ ತಕ್ಷಣವೇ
ನನ್ನ ಆಸೆಗೆ ಬ್ರೆಕ್ ಬಿದ್ದಂತಾಗುತ್ತದೆ
ಆಗಾಗ ನನ್ನ ಹುಚ್ಚಾಟವನ್ನು
ಗಮನಿಸಿದ ಮಗ ಗದರಿದ್ದೂ ಇದೆ
ಏನಮ್ಮ ನಿನಗೆ ಅಷ್ಟೂ ತಿಳಿಯೊಲ್ವ
ಪಾಪ ಆ ಚೆಂದದ ಜೋಡಿ ಮೀನುಗಳಿಗೆ
ಯಾಕೆ ತೊಂದ್ರೆ ಕೊಡ್ತೀಯ.
ಅಕಸ್ಮಾತ್ ಒಂದು ಸತ್ತರೆ
ಇನ್ನೊಂದು ಬದುಕಲಾರದು
ನಿನಗೇನು ಗೊತ್ತು ಆ ಜೋಡಿ
ಪ್ರೇಮಿಗಳ ಆತ್ಮಸಾಂಗತ್ಯ
ಥಟ್ಟನೆ ಬೆಚ್ಚಿಬಿದ್ದೆ ಎಚ್ಚೆತ್ತುಕೊಂಡೆ
ಹಾಲುಗಲ್ಲದ ಆ ಹುಡುಗನಿಗೆ
ಎಲ್ಲಿಂದ ಬಂತು ಈ ಪ್ರೀತಿಯ ಅರಿವು
ಸಾಂಗತ್ಯದ ಬೆಸುಗೆಯ ಅನುರಾಗ
ಥಟ್ಟನೆ ನೆನಪಾಯಿತು
ಮೊನ್ನೆ ಅವನು ಗುನುಗುನಿಸುತ್ತಿದ್ದ ಹಾಡು
ನಿನ ಬಿಟ್ಟು ನಾ ಹ್ಯಾಂಗ ಇರಲಿ
ಚೆನ್ನಾಗಿದೆ ಕವನ mam
ಉತ್ತಮವಾಗಿದೆ ಮೆಡಂ
ಒಂದು ಕಡೆ ಮೀನಿನ ಸಾಂಗತ್ಯ
ಮತ್ತು
ತಲ್ಲಣ ಚಿತ್ರಣವಾದರೆ ಇನ್ನೊಂದೆಡೆ
ಮಗನಲ್ಲಿರುವ ಯೌವ್ವನದ ಆರಂಬಿಕತೆ ಚಿತ್ರಣವಾಗಿದೆ.
ಸುಂದರ ದೃಶ್ಯ ಕಾವ್ಯ
ತುಂಬಾ ಚೆನ್ನಾಗಿದೆ
ಕವನ ತುಂಬಾ ಚೆನ್ನಾಗಿದೆ ನಮಸ್ಕಾರ